ETV Bharat / state

​​​​​​​ಬರದಿಂದ ಬೆಂಡಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರುಣನ ಆರ್ಭಟ: ಗರಿಗೆದರಿದ ಕೃಷಿ ಚಟುವಟಿಕೆ

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 10 ದಿನಗಳಿಂದ ಸುರಿಯುತ್ತಿರುವ ಮಳೆಯು ರೈತರಲ್ಲಿ ಹರ್ಷ ತುಂಬಿದೆ. ಬರ, ಅನಾವೃಷ್ಟಿಗಳಿಂದ ಬೇಸತ್ತಿದ್ದ ಜನತೆ ಮಳೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯ ಆರ್ಭಟ
author img

By

Published : Oct 10, 2019, 10:30 AM IST

ಚಿಕ್ಕಬಳ್ಳಾಪುರ: 10 ವರ್ಷಗಳಿಂದಲೂ ಬರಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಮಲೆನಾಡಿನ ಮುದ ನೀಡುತ್ತಿದೆ. ಆಮೆಗತಿಯಲ್ಲಿ ಸಾಗುತ್ತಿದ್ದ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಇದಕೆಲ್ಲ ಕಾರಣವಾಗಿದ್ದು, ಕಳೆದ 10 ದಿನಗಳಿಂದ ಬಿಡುವು ನೀಡದೆ ಸುರಿಯುತ್ತಿರುವ ಮಳೆರಾಯ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆಯ ಆರ್ಭಟ

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ಮಳೆಯ ಕೊರೆತೆಯಿಂದಾಗಿ ಕುಡಿಯುವ ನೀರು ಸೇರಿದಂತೆ ಕೃಷಿ ಕೆಲಸಗಳಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಜಿಲ್ಲೆಯ ಜನರ ಕುಡಿಯುವ ನೀರಿಗೆ ಆಧಾರವಾಗಿದ್ದ ಜಕ್ಕಲಮಡಗು ಸಹ ಬತ್ತಿಹೋಗಿತ್ತು.

ಇಲ್ಲಿನ ಕೇತನಹಳ್ಳಿ ಬಳಿ ಮಿನಿ ಫಾಲ್ಸ್​ಗಳು ಉಂಟಾಗಿದ್ದು, ಪ್ರಕೃತಿ ಪ್ರೇಮಿಗಳನ್ನು ಸೆಳೆಯುತ್ತಿದೆ. ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರಿನಲ್ಲಿಯೂ ಮಳೆ ಮುಂದುವರೆದಿದೆ.

ಜಿಲ್ಲಾಧಿಕಾರಿ ಶ್ರಮಕ್ಕೆ ಸಿಕ್ಕಿತು ಪ್ರತಿಫಲ: ಈಚೆಗೆ ವರ್ಗಾವಣೆಯಾಗಿ ಬಂದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲೆಯಲ್ಲಿ ಕಲ್ಯಾಣಿಗಳ ಸ್ವಚ್ಚತೆಗೆ ಮುಂದಾಗಿದ್ದರು. ಪುರತನ ಕಲ್ಯಾಣಿಗಳಲ್ಲಿ ತುಂಬಿದ್ದ ಹೂಳು ತೆಗೆದು ಹಾಕಿ, ಸ್ವಚ್ಚತೆ ಮಾಡಲಾಗಿತ್ತು. ಮಳೆ ನೀರು ತುಂಬಿಕೊಳ್ಳುವಂತೆ ವ್ಯವಸ್ಥೆ ಕೂಡ ಮಾಡಿಸಿದ್ದರು. ಇದರಿಂದ ಕಲ್ಯಾಣಿಗಳಲ್ಲಿ ನೀರುತುಂಬಿಕೊಂಡು, ಜನತೆಯ ಮೆಚ್ಚುಗೆ ಗಳಿಸಿದ್ದಾರೆ. ಅದೇ ರೀತಿ ನಿರ್ಮಿಸಲಾಗಿದ್ದ ಚೆಕ್ ಡ್ಯಾಂ ಗಳಲ್ಲೂ ನೀರು ತುಂಬಿಕೊಂಡಿದೆ.

Intro:ಕಳೆದ ಹತ್ತು ವರ್ಷಗಳಿಂದಲೂ ಬರಪೀಡಿತ ಪ್ರದೇಶವಾಗಿ ಗುರುತ್ತಿಸಿಕೊಂಡಿರುವ ಚಿಕ್ಕಬಳ್ಳಾಪುರ ಜನತೆಗೆ ಈ ವರ್ಷ ಮಳೆರಾಯ ತನ್ನ ಕೃಪೆಯನ್ನು ತೋರಿದ್ದಾರೆ.

Body:ಕಳೆದ 10 ದಿನಗಳಿಂದ ಸುರಿದ ಬಾರೀ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಸೇರಿದಂತೆ ಬರಪೀಡಿತ ಪ್ರದೇಶವಾಗಿ ಗುರುತಿಸಿಕೊಂಡಿರುವ ಕೋಲಾರ ಜಿಲ್ಲೆಯ ಜನತೆಗೆ ವರುಣ ತನ್ನ ಕೃಪೆಯನ್ನು ತೋರಿದ್ದು ಉಭಯ ಜಿಲ್ಲೆಯ ಜನತೆಯಲ್ಲಿಯೂ ಹಬ್ಬದ ವಾತಾವರಣ ನೆಲೆನಿಂತಿದೆ.

ಚಿಕ್ಕಬಳ್ಳಾಪುರ ನಗರದ ಜನತೆಗೆ ಸೇರಿದಂತೆ ಹಲವೆಡೆ ಕುಡಿಯುವ ನೀರಿಗೆ ಮೂಲಧಾರವಾದ ಜಕ್ಕಲಮಡಗು ಸಹ ಭತ್ತಿಹೋಗಿದ್ದು ಹಲವೆಡೆ ನೀರಿನ ಅಭಾವವನ್ನು ಜಿಲ್ಲಾಡಳಿತ ಎದುರುಸಿರುವುದು ಕಣ್ಣಮುಂದೆಯೇ ಇದೆ. ಆದರೆ ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಕ್ಕಲಮಡುಗು ಸೇರಿದಂತೆ ಹಲವು ಕೆರೆಕುಂಟೆಗಳಲ್ಲಿ ನೀರು ಸೇರಿಕೊಂಡಿದ್ದು ಜಿಲ್ಲೆಯ ಜನತೆಗೆ ಮತ್ತಷ್ಟು ಸಂತೋಷ ವನ್ನು ತಂದುಕೊಟ್ಟಂತಾಗಿದೆ.

ಮಳೆರಾಯ ಕೃಪೆಗೆ ಮಲೆನಾಡಾಯ್ತು ಚಿಕ್ಕಬಳ್ಳಾಪುರ...!

ಹೌದು ಇತ್ತಿಚ್ಚಿನ ದಿನಗಳಲ್ಲಿ ಸುರಿದ ಬಾರೀ ಮಳೆಗೆ ಸಣ್ಣಸಣ್ಣ ಜಲಪಾತಗಳು ಉದ್ಬವವಾಗಿದ್ದು ಪ್ರವಾಸಿತಾಣಗಳಾಗಿಯೂ ಪ್ರಸಿದ್ದಿಯನ್ನು ಪಡೆಯುತ್ತಿವೆ.ಜಲಮಡಗು ಸೇರಿದಂತೆ ಕೇತನಹಳ್ಳಿ ಬಳಿ ಮಿನಿ ಪಾಲ್ಸ್ ಗಳು ಕಾಣಿಸಿಕೊಂಡಿದ್ದು ಪ್ರಕೃತಿ ಪ್ರೇಮಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.ಜಿಲ್ಲೆಯ ಬಾಗೇಪಲ್ಲಿ,ಗುಡಿಬಂಡೆ,ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರಿನಲ್ಲಿ ಮಳೆರಾಯನ ಕೃಪೆಗೆ ಜನತೆ ಫೀದಾ ಆಗಿದಂತು ಸುಳ್ಳಲ್ಲಾ.

ಕಲ್ಯಾಣಿಗಳಲ್ಲಿ ತುಂಬಿದ ನೀರು,ಜಿಲ್ಲಾಧಿಕಾರಿಯ ಶ್ರಮಕ್ಕೆ ವರಣನ ಮೆಚ್ಚುಗೆ....

ಇತ್ತಿಚ್ಚೇಗಷ್ಟೇ ವರ್ಗಾವಣೆಯಾದ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್
ಜಿಲ್ಲೆಯಲ್ಲಿ ಕಲ್ಯಾಣಿಗಳ ಸ್ವಚ್ಚತೆಗೆ ಹರಿಕಾರ ಕಟ್ಟಿದ್ದು ಪುರತನ ಕಲ್ಯಾಣಿಗಳ ಸ್ವಚ್ಚತೆಗೆ ಕೈಹಾಕಿ ಜಿಲ್ಲೆಯ ಕಲ್ಯಾಣಿಗಳನ್ನು ಸ್ವಚ್ಚತೆ ಮಾಡಿ ನೀರುತುಂಬಿಕೊಳ್ಳುವಂತೆ ವ್ಯವಸ್ಥೆ ಮಾಡಿಸಿದ್ದರು.ಸದ್ಯ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ದ್ ಶ್ರವಣ್ ಶ್ರಮಕ್ಕೆ ವರಣದೇವ ಕೃಪೆಯನ್ನು ತೋರಿದ್ದು ಕಲ್ಯಾಣಿಗಳಲ್ಲಿ ನೀರುತುಂಬಿಕೊಂಡು ಜನತೆಯ ಮೆಚ್ಚುಗೆಯ ಜಿಲ್ಲಾಧಿಕಾರಿಯಾಗಿದ್ದಾರೆ.ಅದೇ ರೀತಿ ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ ಚೆಕ್ ಡ್ಯಾಂ ಗಳಲ್ಲೂ ನೀರು ತುಂಬಿಕೊಂಡಿದ್ದು ಅಧಿಕಾರಿಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತಾಗಿದೆ.

ಇನ್ನೂ ಜಿಲ್ಲೆಯ ಹಲವೆಡೆ ಅಧಿಕ ಮಳೆಗೆ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದ್ದು ಓರ್ವ ಮಹಿಳೆಯನ್ನು ಬಲಿಪಡೆದುಕೊಂಡಿದೆ ಎನ್ನಬಹುದು.

ಒಟ್ಟಾರೆಯಾಗಿ ಈ ವರ್ಷದ ಮಳೆ ರೈತರ ಸಂತಸವನ್ನು ಏರಿಕೆ ಮಾಡಿದೆ ಎನ್ನುವುದರಲ್ಲಿ ಬೇರೊಂದು ಮಾತ್ತಿಲ್ಲಾ ಎನ್ನಬಹುದು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.