ಚಿಕ್ಕಬಳ್ಳಾಪುರ: ಮಂಕಿಪಾಕ್ಸ್ ಹಿನ್ನೆಲೆ ರಾಜ್ಯದ ಎಲ್ಲಾ ಗಡಿಗಳಲ್ಲಿ ಬಹಳ ಕಟ್ಟೆಚ್ಚರ ವಹಿಸಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಸರ್ಕಾರದ ವತಿಯಿಂದ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕರು ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗದಿದ್ದರೂ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ವಿಮಾನ ನಿಲ್ದಾಣ, ಬಂದರುಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದರು. ಜ್ವರ, ಚರ್ಮದ ಮೇಲೆ ಗಾಯಗಳಾದರೆ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ತಿಳಿಸಿದರು.
ಗಂಧದ ಜೊತೆ ಜಗಳವಾಡಿದರೆ ಗಂಧ ಅಂಟಿಕೊಳ್ಳುತ್ತದೆ. ಗಲೀಜು ಜೊತೆ ಜಗಳವಾಡಿದರೆ ಗಲೀಜು ಅಂಟಿಕೊಳ್ಳುತ್ತದೆ. ಹತ್ತಿರದಲ್ಲೇ ಎಲ್ಲಾ ಬಯಲಿಗೆ ಬರುತ್ತದೆ. ವೇಟ್ ಮಾಡಿ ಎಂದು ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಡಾ. ಎಂ.ಸಿ ಸುಧಾಕರ್ ವಿರುದ್ಧ ಇದೇ ವೇಳೆ ಸಚಿವರು ವಾಗ್ದಾಳಿ ನಡೆಸಿದ್ದಾರೆ. ನನ್ನ ದಾಖಲೆಗಳನ್ನೆಲ್ಲ ಎಲೆಕ್ಷನ್ ಕಮಿಷನ್ಗೆ ಕೊಟ್ಟಿದ್ದೇನೆ, ಐಟಿಗೆ ಸಲ್ಲಿಸುತ್ತಿದ್ದೇನೆ, ಲೋಕಯುಕ್ತಕ್ಕೆ ಕೊಡುತ್ತಿದ್ದೇನೆ. ಅವರ ರೀತಿ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ರಾಜ್ಯ ಸರ್ಕಾರವನ್ನು ಗವರ್ನರ್ ಪದಚ್ಯುತಿಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಲಿ: ಬಿ ಕೆ ಹರಿಪ್ರಸಾದ್