ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೆಪಲ್ಲಿ ತಾಲೂಕಿನ ರಾಮೋಜಿಪಲ್ಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಅರಣ್ಯ ಜಾಗವನ್ನು ಒತ್ತುವರಿ ಮಾಡಿತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ವಾಹನಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ರಾಮೋಜಿಪಲ್ಲಿ ಗ್ರಾಮದ ಶ್ರೀನಿವಾಸ ಎಂಬುವರು ತಮ್ಮ ಜಮೀನಿನ ಪಕ್ಕದಲ್ಲಿರುವ ಅರಣ್ಯ ಭೂಮಿಯನ್ನು ರಾತ್ರಿ ಸಮಯದಲ್ಲಿ ಜೆಸಿಬಿ ಮೂಲಕ ಸುಮಾರು ಆರು ಗುಂಟೆ ಜಾಗವನ್ನು ಒತ್ತುವರಿ ಮಾಡುತ್ತಿದ್ದರು.
ಈ ವೇಳೆ ಖಚಿತ ಮಾಹಿತಿ ಮೇರೆಗೆ ಬಾಗೇಪಲ್ಲಿ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂದು ಜೆಸಿಬಿ ಹಾಗೂ ಎರಡು ದ್ವಿಚಕ್ರ ವಾಹನ ಗಳನ್ನ ವಶಕ್ಕೆ ಪಡೆದು, ಜೆಸಿಬಿ ಚಾಲಕ ಅಂಜಿನಪ್ಪ, ಮಾಲೀಕ ಬೈರಾರೆಡ್ಡಿ ಮತ್ತು ಒತ್ತುವರಿ ಮಾಡಿಸುತ್ತಿದ್ದ ಶ್ರೀನಿವಾಸ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ.