ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಅಚೆಪಲ್ಲಿ ಗ್ರಾಮದ ಬಳಿ ಸಾರಿಗೆ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
![Accident betwen bus-bike in bagepalli](https://etvbharatimages.akamaized.net/etvbharat/prod-images/5784482_thumb.jpg)
ಬಾಗೇಪಲ್ಲಿ ಘಟಕಕ್ಕೆ ಸೇರಿದ ಸಾರಿಗೆ ವಾಹನ ತಾಲೂಕಿನಿಂದ ಚಾಕವೇಲು ಕಡೆಗೆ ಬರುವಾಗ ಅಚೆಪಲ್ಲಿ ಬಳಿ ಹೀರೋ ಹೊಂಡಾ ಬೈಕ್ಗೆ ಡಿಕ್ಕಿ ಹೊಡೆದಿದೆ.
ಪಾತಪಾಳ್ಯ ಗ್ರಾಮದ ನಾಗರಾಜಪ್ಪರ ಮಗನಾದ ವೆಂಕಟೇಶ್ (23) ಎಂಬಾತನ ಮೇಲೆ ಸಾರಿಗೆ ಬಸ್ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.