ಚಿಕ್ಕಬಳ್ಳಾಪುರ : ಜಿಲ್ಲೆಯಾದ್ಯಂತ ಯುಗಾದಿ ಹಬ್ಬದ ದಿನದಂದು ಸುಮಾರು 11 ಗಂಟೆಯಿಂದ ಸರಿಸುಮಾರು ಎರಡು ತಾಸು ಹೆಚ್ಚಿನ ಕಾಲ ಸೂರ್ಯ ವಿಸ್ಮಯಕಾರಿಯಾಗಿ ಕಂಗೊಳಿಸಿದ್ದಾನೆ.
ಹೌದು, ಘನೀಕೃತ ನೀರಿನ ಕಣಗಳ (ಮಂಜುಗಡ್ಡೆ) ಮೂಲಕ ಬೆಳಕು ಹಾದು ಹೋದಾಗ ಉಂಟಾಗುವ ಈ ಸಾಮಾನ್ಯ ವಿದ್ಯಮಾನಕ್ಕೆ ‘22 ಡಿಗ್ರಿ ಹ್ಯಾಲೋ’ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಮೋಡಗಳು ಚಲಿಸುತ್ತ ಸೂರ್ಯನ ಸುತ್ತ ಬಂದಾಗ ಈ ರೀತಿ ಕಾಣಿಸುವ ಸಾಧ್ಯತೆಯಿದೆ.
‘ವರ್ಷದಲ್ಲಿ ಎಷ್ಟು ಸಲ ಬೇಕಾದರೂ ಈ ರೀತಿಯ ಉಂಗುರದ ಮಾದರಿಯ ರಚನೆಗಳಾಗಬಹುದು. ಇದಕ್ಕೆ ವಾತಾವರಣವೇ ಕಾರಣ. ಘನೀಕೃತ ನೀರಿನ ಮೂಲಕ ಬೆಳಕು ಹಾದುಹೋದಾಗ ಬೆಳಕಿನ ವಿಭಜನೆಯಾಗುತ್ತದೆ. ಆಗ ಕಾಮನಬಿಲ್ಲಿನ ರೀತಿಯಲ್ಲೇ ಸೂರ್ಯನ ಸುತ್ತ ರಚನೆಯೊಂದು ಗೋಚರಿಸುತ್ತದೆ. ಇನ್ನು ಈ ಸನ್ನಿವೇಶ ಹಬ್ಬದಲ್ಲಿ ನಡೆದಿರುವುದರಿಂದ ಅಚ್ಚರಿಗೆ ಕಾರಣವಾಯಿತು.