ETV Bharat / state

ಈ ಶಾಲೆಯಲ್ಲಿ ಹೆಣ್ಮಕಳೇ ಸ್ಟ್ರಾಂಗ್, ಜೊತೆಗೆ ಶಾಲೆಯಲ್ಲಾ ಹಸಿರೇ ಹಸಿರು.. - ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ‌ ಮೈಲಾಪುರ ಸರ್ಕಾರಿ ಶಾಲೆ ಉತ್ತಮ ಶಿಕ್ಷಣ, ಪರಿಸರದೊಂದಿಗೆ ಅಧಿಕ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕಲಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಶಾಲೆಯಲ್ಲಿ ಹೆಣ್ಮಕಳೇ ಸ್ಟ್ರಾಂಗ್, ಜೊತೆಗೆ ಶಾಲೆಯಲ್ಲಾ ಹಸಿರೇ ಹಸಿರು..
author img

By

Published : Jul 22, 2019, 5:17 PM IST

Updated : Jul 22, 2019, 7:33 PM IST

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮಕ್ಕಳ ಕೊರತೆಯಿಂದಾಗಿ ಸರ್ಕಾರಿ‌ ಶಾಲೆಗಳನ್ನು ಮುಚ್ಚುವ ಹೇಳಿಕೆಗಳು ಬರುತ್ತಿರುವ ನಿಟ್ಟಿನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಶುರುವಾಗಿದ್ದವು. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ‌ ಮೈಲಾಪುರ ಸರ್ಕಾರಿ ಶಾಲೆ ಉತ್ತಮ ಶಿಕ್ಷಣ, ಪರಿಸರದೊಂದಿಗೆ ಅಧಿಕ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕಲಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಶಾಲೆಯಲ್ಲಿ ಹೆಣ್ಮಕಳೇ ಸ್ಟ್ರಾಂಗ್, ಜೊತೆಗೆ ಶಾಲೆಯಲ್ಲಾ ಹಸಿರೇ ಹಸಿರು..

ಚಿಂತಾಮಣಿಯ ಕೈವಾರ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಲಾಪುರ ವಿಸ್ತೀರ್ಣದಲ್ಲಿ ಚಿಕ್ಕದಾಗಿದೆ. ಈ ಶಾಲೆಯಲ್ಲಿ ಒಟ್ಟು 48 ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದು, ಅದರಲ್ಲಿ 33 ಮಕ್ಕಳು ಬಾಲಕಿಯರೇ ಆಗಿದ್ದಾರೆ. ಚಿಕ್ಕದಾದ ಶಾಲೆಯ ಆವರಣದಲ್ಲಿ ಮಕ್ಕಳೇ ಗಿಡಗಳನ್ನು ಬೆಳೆಸಿ, ತಮ್ಮ ಮನೆಗಳಿಂದ ಗೊಬ್ಬರವನ್ನು ತಂದು 30ಕ್ಕೂ ಹೆಚ್ಚು ವಿವಿಧ ಗಿಡಗಳ ಪೋಷಣೆ ಮಾಡಿ ಬೆಳೆಸುತ್ತಿದ್ದಾರೆ. ಅದೇ ರೀತಿ ಶಾಲೆಯ ಆವರಣದಲ್ಲಿ ಕಸ ವಿಂಗಡನೆಯನ್ನು ಮಾಡಿ ಗೊಬ್ಬರವನ್ನಾಗಿ ಮಾಡುತ್ತಾರೆ. ಕಸದ ರಾಶಿಯಲ್ಲಿ ಪ್ಲಾಸ್ಟಿಕ್, ಕಾಗದಗಳನ್ನು ಬೇರ್ಪಡಿಸಿ ಮಾರಾಟ ಮಾಡಿ, ಬಂದ ಹಣದಲ್ಲಿ ಸಿಹಿ ತಂದು ಹಂಚಿಕೊಳ್ಳುತ್ತಾರೆ.

ಗ್ರಾಮದ ಜನರೂ ಕೂಡ ಶಾಲೆಯ ಬೆಳವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಣವನ್ನು ಸಂಗ್ರಹಿಸಿ, ಶಾಲೆಯ ಆವರಣದಲ್ಲಿ ಗಣಪನ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಇದರ ಸಲುವಾಗಿಯೇ 2017ರಲ್ಲಿ ಮೈಲಾಪುರ ಶಾಲೆ ಹಳದಿ ಪ್ರಶಸ್ತಿಗೆ ಪಾತ್ರವಾಗಿದೆ.

Intro:ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ದಿನೇ ದಿನೇ ಸಾಕಷ್ಟು ಹೆಸರು ಮಾಡುತ್ತಿವೆ.ಕೆಲವು ಶಾಲೆಗಳು ಅತ್ಯಧಿಕ ಫಲಿತಾಂಶ ವನ್ನು ತಂದು ಕೊಟ್ಟರೆ.ಇನ್ನೂ ಕೆಲವು ಶಾಲೆಗಳು ಗುಣಮಟ್ಟದ ಕೊಠಡಿಗಳಿಂದ,ಸಾಂಸ್ಕೃತಿಕ ವಾಗಿ,ಮೂಲಭೂತ ಸೌಕರ್ಯಗಳಿಂದ ಹಾಗೂ ಉತ್ತಮ ಪರಿಸರದಿಂದ ಸಾಕಷ್ಟು ಶಾಸಲೆಗಳು ಹೆಸರುಗಳಿಸಿದ್ದರೆ ಇಲ್ಲೊಂದು ಸರ್ಕಾರಿ ಶಾಲೆ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.

Body:ಹೌದು ರಾಜ್ಯದಲ್ಲಿ ಸರ್ಕಾರಿ‌ ಶಾಲೆಗಳನ್ನು ಮುಚ್ಚುವ ಹೇಳಿಕೆಗಳು ಬರುತ್ತಿರುವ ನಿಟ್ಟಿನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಶುರುವಾಗಿದ್ದವು ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ‌ ಮೈಲಾಪುರ ಸರ್ಕಾರಿ ಶಾಲೆ ಉತ್ತಮ,ಶಿಕ್ಷಣ ಪರಿಸರದೊಂದಿಗೆ ಅಧಿಕ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕಲಿಸುತ್ತಿರುವ ಹೆಗ್ಗಳಿಕೆ ಪಾತ್ರವಾಗಿದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈಲಾಪುರ ವಿಸ್ತೀರ್ಣ ರಲ್ಲಿ ಚಿಕ್ಕದಾಗಿದ್ದರೂ ಎಲ್ಲರನ್ನು ಮಂತ್ರಮುಗ್ದರನ್ನಾಗಿಸುತ್ತಿದೆ. ಚಿಂತಾಮಣಿ ಕೈವಾರ ರಸ್ತೆಯಲ್ಲಿರುವ ಮೈಲಾಪುರದ ಶಾಲೆಯಲ್ಲಿ ಒಟ್ಟು 48 ಮಕ್ಕಳು ವಿಧ್ಯಾಭ್ಯಾಸ ವನ್ನು ಮಾಡುತ್ತಿದ್ದು ಅದರಲ್ಲಿ 33 ಮಕ್ಕಳು ಬಾಲಿಕಯರೇ ಆಗಿರುವುದು ಮತ್ತೊಂದು ವಿಶೇಷವಾಗಿದೆ.

ಚಿಕ್ಕದಾಗಿದ್ದರೂ ಚೋಕದಾಗಿರಬೇಕು ಎಂಬುವುದಕ್ಕೆ ಉತ್ತಮ ಉದಾಹರಣೆ ಎಂದರೇ ಈ ಶಾಲೆಯ ಹೆಸರನ್ನು ಸೂಚಿಸಿದರೆ ತಪ್ಪಾಗಲಾರದು.ಚಿಕ್ಕದಾದ ಶಾಲೆಯ ಆವರಣದಲ್ಲಿ ಉತ್ತಮ ಪರಿಸರವನ್ನು ಬೆಳಸಿ ಎಲ್ಲರನ್ನು ತನ್ನತ್ತ ಗಮನಸೆಳೆಯುತ್ತಿದೆ. ಇನ್ನೂ ಮಕ್ಕಳೆ ಗಿಡಗಳನ್ನು ಬೆಳಸಿ ತಮ್ಮ ಮನೆಗಳಿಂದ ಗೊಬ್ಬರವನ್ನು ತಂದು 30 ಕ್ಕೂ ಹೆಚ್ಚು ಗಿಡಗಳನ್ನು ಪೋಷಣೆ ಮಾಡಿ ಬೆಳೆಸುತ್ತಿರುವುದು ಮತ್ತೊಂದು ವಿಶೇಷ ಎನ್ನಬಹುದು.ಅದೇ ರೀತಿ ಶಾಲೆಯ ಆವರಣದಲ್ಲಿ ಕಸ ವಿಂಗಡನೆಯನ್ನು ಮಾಡಿ ಗೊಬ್ಬರವನ್ನಾಗಿ ಮಾಡುತ್ತಾರೆ.ಇನ್ನೂ ಕಸದ ರಾಶಿಯಲ್ಲಿ ಪ್ಲಾಸ್ಟಿಕ್, ಖಾಗದಗಳನ್ನು ಬೆರ್ಪಡಿಸಿ ಮಾರಾಟಮಾಡಿ ಬಂದ ಹಣವನ್ನು ಬಿಸಿಯೂಟ,ಸಿಹಿಯನ್ನು ತಂದು ಹಂಚುಕೊಳ್ಳುತ್ತಾರೆ.

ಗ್ರಾಮದ ಜನತೆಯೂ ಶಾಲೆಯ ಬೆಳವಣಿಗೆಯ ಪ್ರೋತ್ಸಾಹಕ್ಕೆ ಸಾಕಷ್ಟು ಸಾಥ್ ನೀಡುತ್ತಿರುವುದು ಮತ್ತೊಂದು ಖುಷಿಯ ಸುದ್ದಿ ಎನ್ನಬಹುದು. ಅದೇ ರೀತಿ ಶಾಲೆಯ ಹಿರಿಯ ವಿದ್ಯಾರ್ಥಿ ಗಳು ಹಣವನ್ನು ಸಂಗ್ರಹಿಸಿ ಶಾಲೆಯ ಆವರಣದಲ್ಲಿ ಗಣಪನ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಇದರ ಸಲುವಾಗಿಯೇ 2017 ರಲ್ಲಿ ಮೈಲಾಪುರ ಶಾಲೆ ಹಳದಿ ಪ್ರಶಸ್ತಿಗೆ ಪಾತ್ರವಾಗಿದೆ.ಜೊತೆಗೆ ವಿದ್ಯಾಭ್ಯಾಸವನ್ನು ಅಧಿಕ ಮಕ್ಕಳು ಬಾಲಕಿಯರೇ ಪಡೆಯುತ್ತಿರುವುದರಿಂದ ಹೆಣ್ಣುಮಕ್ಕಳ ಶಾಲೆಯಾಗಿರುವುದು ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನೂ ಎಲ್ಲಾ ಮಕ್ಕಳು ಒಂದೇ ಗ್ರಾಮಕ್ಕೆ ಸೇರಿರುವ ಮಕ್ಕಳಾದರಿಂದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಹಾಗೂ
ಏನೇ ಆಗಲೀ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅದರಲ್ಲಿಯೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಣವನ್ನು ಪಡೆಸುತ್ತಿರುವುದಕ್ಕೆ ಗ್ರಾಮದ ಪೋಷಕರಿಗೆ ಸಲಾಂ ಎನ್ನದೇ ಮತ್ತೇನು ಹೇಳಲಾಗುತ್ತದೆ..

Conclusion:ಚೌಡರೆಡ್ಡಿ (ಗ್ರಾಮಪಂಚಾಯತಿ ಸದಸ್ಯ)
ಪ್ರಭಾವತಮ್ಮ (ಹೆಡ್ ಮೇಡಂ...)
Last Updated : Jul 22, 2019, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.