ಚಿಕ್ಕಬಳ್ಳಾಪುರ : 30 ವರ್ಷಗಳಿಂದ ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ. ರಾಜಣ್ಣ ಬಿಜೆಪಿ ಪಾಲಾಗಿದ್ದಾರೆ. ಜೆಡಿಎಸ್ ಪಕ್ಷ ತೊರೆದು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಮಾಜಿ ಶಾಸಕ ಎಂ.ರಾಜಣ್ಣ ಬಿಗ್ ಶಾಕ್ ನೀಡಿದ್ದು, ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ ಸುಧಾಕರ್ ಮುಂದಾಳತ್ವದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೇ ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ನೀಡುವ ವಿಚಾರದ ಗೊಂದಲದಲ್ಲಿ ಸ್ಪರ್ಧೆ ಮಾಡಿ ಸೋಲನ್ನು ಒಪ್ಪಿಕೊಂಡಿದ್ದ ಮಾಜಿ ಶಾಸಕ ರಾಜಣ್ಣ, ನಂತರದ ಚುನಾವಣೆಗೆ ಕ್ಷೇತ್ರದ ಮೇಲೂರು ರವಿಗೆ ಟಿಕೆಟ್ ನೀಡಿದ್ದು, ಇದರಿಂದ ಬೇಸತ್ತ ರಾಜಣ್ಣ ನಿನ್ನೆ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಶಾಸಕ ಎಂ. ರಾಜಣ್ಣ , ಸುಧಾಕರ್ ಅವರ ಜೊತೆ ನಾನು 10 ವರ್ಷದಿಂದ ಸಂಪರ್ಕದಲ್ಲಿದ್ದೇನೆ. ನನಗೆ ಆದ ಅನ್ಯಾವನ್ನು ಅವರ ಮುಂದೆ ಹೇಳಿಕೊಂಡಿದ್ದೇನೆ.
ಜೆಡಿಎಸ್ ಪಕ್ಷದ ವರಿಷ್ಠರು ನನಗೆ ಬೆನ್ನಿಗೆ ಚೂರಿ ಹಾಕಿದ್ದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲಾ. ತದ ನಂತರ ನಾನು ತಟಸ್ಥನಾಗಿದ್ದೆ. ಈಗ ಮೋದಿ ಹಾಗೂ ಯಡಿಯೂರಪ್ಪನವರ ನಾಯತ್ವದಲ್ಲಿ ಸುಧಾಕರ್ ಅವರ ನೇತೃತ್ವದಲ್ಲಿ ನಮ್ಮ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಬಿಜೆಪಿ ಸೇರಿಕೊಂಡಿರುವೆ ಎಂದರು.
ಓದಿ:ಅಧಿವೇಶನದ ಮೊದಲ ದಿನದಂದೇ ಸಿಎಂ ತವರು ಜಿಲ್ಲಾ ಪ್ರವಾಸ..
ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್, ಮಾಜಿ ಶಾಸಕರಾದ ರಾಜಣ್ಣನವರು ಮತ್ತು ಅವರ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುತ್ತಿರುವುದು ಸಂತಸ ತಂದಿದ್ದೆ. ಯಾವುದೇ ಷರತ್ತುಗಳನ್ನ ವಿಧಿಸದೆ ಪ್ರಾಧಾನಿಗಳು, ಮುಖ್ಯಮಂತ್ರಿಗಳ ನಾಯಕತ್ವ ಮೆಚ್ಚಿ ಪಕ್ಷ ಸೇರಿಕೊಳ್ಳುತ್ತಿದ್ದಾರೆ. ತಾಲೂಕಿನ ಅಭಿವೃದ್ದಿಗೆ ನಮ್ಮ ಬೆಂಬಲವಿರಲಿದ್ದು, ನಾಳೆ ಮುಖ್ಯಮಂತ್ರಿಗಳ ಹೂಗುಚ್ಚವನ್ನು ನೀಡಿ ಸ್ವಾಗತ ಮಾಡಲಿದ್ದಾರೆಂದು ತಿಳಿಸಿದರು.