ETV Bharat / state

Road Accident: ಬೆಳಗ್ಗೆಯೇ ಟೈಟಾದ ಡ್ರೈವರ್.. ಚಿಂತಾಮಣಿಯಲ್ಲಿ ಪಾದಚಾರಿ ಸೇರಿ 7 ಮಂದಿಗೆ ಡಿಕ್ಕಿ ಹೊಡೆದ ಆಟೋ - 8 injured in chikkaballapur road accident

ಆಟೋ ಚಾಲಕನೋರ್ವ ಕುಡಿದ ಅಮಲಿನಲ್ಲಿ 7 ಮಂದಿಗೆ ಡಿಕ್ಕಿ ಹೊಡೆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಬಾಗೇಪಲ್ಲಿಯಲ್ಲಿ ನಡೆದಿದೆ.

road accident
ಚಿಕ್ಕಬಳ್ಳಾಪುರದಲ್ಲಿ ನಡೆದ ರಸ್ತೆ ಅಪಘಾತ
author img

By

Published : Jun 12, 2023, 1:01 PM IST

ಚಿಕ್ಕಬಳ್ಳಾಪುರದಲ್ಲಿ ನಡೆದ ರಸ್ತೆ ಅಪಘಾತ

ಚಿಕ್ಕಬಳ್ಳಾಪುರ : ಆಟೋ ಚಾಲಕನೋರ್ವ ಬೆಳ್ಳಂಬೆಳಗ್ಗೆ ಕುಡಿದ ಅಮಲಿನಲ್ಲಿ ಪಾದಚಾರಿ ಸೇರಿದಂತೆ 7 ಜನರಿಗೆ ಡಿಕ್ಕಿ ಹೊಡೆದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಹೊರವಲಯದಲ್ಲಿರುವ ಬಾಗೇಪಲ್ಲಿ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಶ್ರೀನಿವಾಸಪುರ ನಿವಾಸಿ ವೆಂಟರಾಯಪ್ಪ ಕುಡಿದು ವಾಹನ ಚಲಾಯಿಸಿದ ಡ್ರೈವರ್​. ಗಾಯಾಳುಗಳು ನವೀನ್, ಚೌಡಪ್ಪ, ಸಂಜಯ್, ಹಿಂದು, ಗೌತಮ್, ನಂದೀಶ್(9) ಸೋಮಶೇಖರ್ ಎಂದು ತಿಳಿದು ಬಂದಿದೆ. ಕುಡಿದ ಅಮಲಿನಲ್ಲಿ ಚಿಂತಾಮಣಿ ನಗರದಿಂದ ಬಾಗೇಪಲ್ಲಿ ರಸ್ತೆ ಮಾರ್ಗವಾಗಿ ಸ್ವಗ್ರಾಮಕ್ಕೆ ತೆರಳುವ ವೇಳೆ ಪೆಟ್ರೋಲ್ ಟ್ಯಾಂಕ್​ ಬಳಿ ಪಾದಚಾರಿಗೆ ಆಟೋ ಡಿಕ್ಕಿ ಹೊಡೆದಿದೆ. ನಂತರ ಗೌನಹಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಆಟೋಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ.

ಇನ್ನು, ಆಟೋ ಚಾಲಕನಿಗೆ ಸಹ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಮದುವೆಗೆ ತೆರಳಿ ವಾಪಸ್​ ಆಗುತ್ತಿದ್ದ ವೇಳೆ ಭೀಕರ ಅಪಘಾತ.. ಮಗು ಸೇರಿ ಏಳು ಜನ ಸಾವು!

ಆಂಧ್ರಪ್ರದೇಶ ರಸ್ತೆ ಅಪಘಾತ : ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಇಂದು ಭೀಕರ ರಸ್ತೆ ಅಪಘಾತ ನಡೆದಿದೆ. ನಲ್ಲಜರ್ಲಾ ತಾಲೂಕಿನ ಅನಂತಪಲ್ಲಿ ಉಪನಗರದಲ್ಲಿ ಸಂಭವಿಸಿದ ರಸ್ತೆ ದುರಂತದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ರಾಜಮಹೇಂದ್ರವರಂನ ಪ್ರಕಾಶನಗರದ 8 ಮಂದಿ ಹೈದರಾಬಾದ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಊರಿಗೆ ಮರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು, ಅನಂತಪಳ್ಳಿಯ ಉಪನಗರದ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಇನ್ನು ಚನ್ನಪಟ್ಟಣ ತಾಲೂಕಿನ ಕೋಲೂರು ಗೇಟ್ ಬಳಿ ಸಹ ನಿನ್ನೆ ರಸ್ತೆ ಅಪಘಾತ ಸಂಭವಿಸಿತ್ತು. ಕಾರು ಪಲ್ಟಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿತ್ತು. ಬೆಂಗಳೂರಿಂದ ವೇಗವಾಗಿ ಬಂದ ಟಾಟಾ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು.

ಇದನ್ನೂ ಓದಿ : Mysore Bangalore Highway accident: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಓರ್ವ ಸಾವು ; 3 ಮಂದಿಗೆ ತೀವ್ರ ಗಾಯ

ಹಾಗೆಯೇ, ನಿನ್ನೆ ನಸುಕಿನ ಜಾವ ಡ್ರೈವರ್​ನ​ ನಿಯಂತ್ರಣ ತಪ್ಪಿದ ಮಾರುತಿ ಕಾರೊಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆಗೆ ಉರುಳಿ ಬಿದ್ದಿತ್ತು. ಪರಿಣಾಮ ಕಾರಿನಲ್ಲಿದ್ದ ಹೊಸೂರು ನಿವಾಸಿ ಹರಿಪ್ರಸಾದ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ : Dharwad accident: ಧಾರವಾಡ ಬಳಿ ಲಾರಿ-ಕಾರು ಅಪಘಾತ; ಸ್ಥಳದಲ್ಲೇ ಮೂವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.