ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು ಹೊಸದಾಗಿ 77 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಚಿಕ್ಕಬಳ್ಳಾಪುರ 22, ಚಿಂತಾಮಣಿ 21, ಗೌರಿಬಿದನೂರು 13,ಬಾಗೇಪಲ್ಲಿ 6 ಹಾಗೂ ಗುಡಿಬಂಡೆಯಲ್ಲಿ 5, ಹಾಗು ಶಿಡ್ಲಘಟ್ಟ 10 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,180ಕ್ಕೆ ಏರಿಕೆಯಾಗಿದೆ.
ಗುಣಮುಖರಾದವರ ವಿವರ:
ಚಿಕ್ಕಬಳ್ಳಾಪುರ 46, ಚಿಂತಾಮಣಿ 33, ಬಾಗೇಪಲ್ಲಿ 7, ಶಿಡ್ಲಘಟ್ಟ 25, ಗೌರಿಬಿದನೂರು 15 ಹಾಗೂ ಗುಡಿಬಂಡೆ ವ್ಯಾಪ್ತಿಯಲ್ಲಿ 1 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಂದೇ ದಿನ 127 ಸೋಂಕಿತರು ಬಿಡುಗಡೆಯಾಗಿದ್ದಾರೆ.
ಮೃತಪಟ್ಟವರ ವಿವರ:
ಜಿಲ್ಲೆಯಲ್ಲಿ ಇಂದು ಚಿಂತಾಮಣಿಯ 52 ವರ್ಷದ ಮಹಿಳೆ ಹಾಗೂ 40 ವರ್ಷದ ಪುರುಷ ಮತ್ತು 45 ವರ್ಷದ ಮಹಿಳೆ ಮೃತಪಟ್ಟಿದ್ದು, ಒಟ್ಟು ಸೋಂಕಿತ ಮೃತರ ಸಂಖ್ಯೆ 53 ಕ್ಕೆ ಏರಿಕೆಯಾಗಿದೆ.
ಸದ್ಯ 579 ಸಕ್ರಿಯ ಸೋಂಕಿತರಿಗೆ ಐಸೊಲೇಷನ್ ಸೇರಿದಂತೆ ತಾಲೂಕಿನ ಕೋವಿಡ್ ಕೇರ್ ಸೆಂಟರ್, ಹೋಂ ಐಸೊಲೇಷನ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.