ETV Bharat / state

ಚಿಂತಾಮಣಿಯಲ್ಲಿ ಮನೆಗೆ ಅಪ್ಪಳಿಸಿದ ಸಿಡಿಲು, ಒಂದೇ ಕುಟುಂಬದ ನಾಲ್ವರ ಸಾವು

author img

By

Published : Apr 28, 2021, 12:28 PM IST

ತಾಲೂಕಿನ ಮುರುಗಮಲ್ಲ ಹೋಬಳಿ ಸೋಮಯಾಜಲಹಳ್ಳಿ ಗ್ರಾಮದಲ್ಲಿ ಏಪ್ರಿಲ್‌ 21ರ ಬುಧವಾರ ಅಕಾಲಿಕ ಮಳೆಯಾಗಿತ್ತು. ಈ ವೇಳೆ ಕಲ್ಲು ಚಪ್ಪಡಿ ಮನೆಗೆ ಸಿಡಿಲು ಬಡಿದಿದೆ. ಪರಿಣಾಮ ಒಂದೇ ಕುಟುಂಬದ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಗಾಯಾಳುಗಳ ಪೈಕಿ ನಾಲ್ವರು ಇದೀಗ ಕೊನೆಯುಸಿರೆಳೆದಿದ್ದಾರೆ.

Thunderbolt
Thunderbolt

ಚಿಂತಾಮಣಿ: ಕಳೆದ ಬುಧವಾರ ಕುಟುಂಬವೊಂದು ಮನೆಯಲ್ಲಿ ಮಲಗಿದ್ದ ವೇಳೆ ಸಿಡಿಲು ಬಡಿದು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇವರಲ್ಲಿ ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಕಳೆದ ಭಾನುವಾರದಿಂದ ನಿನ್ನೆಯವರೆಗೆ ಸರಣಿಯಾಗಿ ಸಾವನ್ನಪ್ಪಿದ್ದಾರೆ.

ತಾಲೂಕಿನ ಮುರುಗಮಲ್ಲ ಹೋಬಳಿ ಸೋಮಯಾಜಲಹಳ್ಳಿ ಗ್ರಾಮದಲ್ಲಿ ಏಪ್ರಿಲ್‌ 21ರ ಬುಧವಾರ ಅಕಾಲಿಕ ಮಳೆಯಾಗಿತ್ತು. ಈ ವೇಳೆ ಕಲ್ಲು ಚಪ್ಪಡಿ ಮನೆಗೆ ಸಿಡಿಲು ಬಡಿದಿದೆ. ಪರಿಣಾಮ ಮನೆ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಅಂಬರೀಷ್, ಪತ್ನಿ ಗಾಯತ್ರಮ್ಮ, ಮಕ್ಕಳಾದ ವಾಣಿಶ್ರೀ, ಲಾವಣ್ಯ, ದರ್ಶನ್, ಗೌತಮ್ ಜೊತೆಗೆ ಅಂಬರೀಷ್ ಅವರ ತಂದೆ ಜಗನ್ ಎಂಬುವವರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿತ್ತು. ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಭಾನುವಾರ ಗೌತಮ್ ಎಂಬ 4 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಅದೇ ದಿನ ಸಂಜೆ ತಂದೆ ಅಂಬರೀಷ್ ಮೃತಪಟ್ಟಿದ್ದಾರೆ. ಸೋಮವಾರ ದೊಡ್ಡ ಮಗಳು ವಾಣಿಶ್ರೀ ನಿಧನರಾಗಿದ್ದಾರೆ. ಇನ್ನು ನಿನ್ನೆ ರಾತ್ರಿ 11 ಅಂಬರೀಶ್ ಚಿಕ್ಕ ಮಗಳು ಲಾವಣ್ಯ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳಾದ ಗಾಯತ್ರಮ್ಮ, ದರ್ಶನ್, ಜಗನ್ಗೆ ಹೆಚ್ಚಿನ ಚಿಕಿತ್ಸೆ ದೊರಕಿಸಿ ಜೀವ ಉಳಿಸಿಕೊಡಬೇಕಾಗಿ ಬೋವಿ ಮಹಾಸಭಾದ ಜಿಲ್ಲಾಧ್ಯಕ್ಷ ಗುರ್ರಪ್ಪ ಅವರು ತಾಲ್ಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.