ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಂದು140 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಚಿಕ್ಕಬಳ್ಳಾಪುರ ತಾಲೂಕು-33, ಚಿಂತಾಮಣಿ-12, ಗೌರಿಬಿದನೂರು-39, ಬಾಗೇಪಲ್ಲಿ-30 ಹಾಗೂ ಗುಡಿಬಂಡೆ-1, ಶಿಡ್ಲಘಟ್ಟ-25 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ಪ್ರಕರಣಗಳ ಸಂಖ್ಯೆ 3,897ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಸೊಂಕಿತರಿಗೆ ಐಎಲ್ಐ ಸಂಪರ್ಕ, 18 ಜನರಿಗೆ ಡೊಮೆಸ್ಟಿಕ್ ಟ್ರಾವೆಲ್ ಹಾಗೂ ಉಳಿದ ಸೋಂಕಿತರ ಸಂಪರ್ಕದಿಂದ ಕೊರೊನಾ ದೃಢಪಟ್ಟಿದೆ.
ಗೌರಿಬಿದನೂರಿನ 50 ವರ್ಷದ ಮಹಿಳೆಗೆ ಕೊರೊನಾ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು, ಮೃತರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.
ಚಿಂತಾಮಣಿಯ 19 ಸೊಂಕಿತರು, ಚಿಕ್ಕಬಳ್ಳಾಪುರದ 27, ಬಾಗೇಪಲ್ಲಿಯ 8, ಶಿಡ್ಲಘಟ್ಟದ 11, ಗೌರಿಬಿದನೂರಿನ 29 ಹಾಗೂ ಗುಡಿಬಂಡೆ ವ್ಯಾಪ್ತಿಯ 7 ಸೋಂಕಿತರು ಸೇರಿ 101 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸದ್ಯ 645 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೋವಿಡ್ ಕೇರ್ ಸೆಂಟರ್, ಹೋಂ ಐಸೋಲೇಷನ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.