ETV Bharat / state

ಇಂಗ್ಲೆಂಡ್‌ನಿಂದ ಬಂದಿಳಿದ 10 ಮಂದಿಗೆ‌ ಕೊರೊನಾ ನೆಗಟಿವ್ : ನಿಟ್ಟುಸಿರು ಬಿಟ್ಟ ಚಿಕ್ಕಬಳ್ಳಾಪುರ ಜನ - ಕೊರೊನಾ ನೆಗಟಿವ್

ಬ್ರಿಟನ್​ನಲ್ಲಿ ಎರಡನೇ ಹಂತದ ಕೊರೊನಾ ವೈರಸ್​​ ಸೃಸ್ಠಿಯಾಗಿದೆ. ಈ ಹಿನ್ನೆಲೆ ಇಂಗ್ಲೆಂಡ್​​ನಿಂದ ಚಿಕ್ಕಾಬಳ್ಳಾಪುರಕ್ಕೆ ಬಂದಿದ್ದ ಪ್ರಯಾಣಿಕರಿಗೆ ಸ್ವಾಬ್​ ಟೆಸ್ಟ್​​ ಮಾಡಲಾಗಿತ್ತು..

File Photo
ಸಂಗ್ರಹ ಚಿತ್ರ
author img

By

Published : Dec 25, 2020, 1:45 PM IST

ಚಿಕ್ಕಬಳ್ಳಾಪುರ : ಎರಡನೇ ಹಂತದ ಕೋವಿಡ್​​-19 ಹರಡುವಿಕೆಯ ಬೆನ್ನಲ್ಲೇ ಜಿಲ್ಲೆಯ ವಿವಿಧ ಭಾಗಗಳಿಗೆ ಲಂಡನ್‌ನಿಂದ 15 ಪ್ರಯಾಣಿಕರು ಆಗಮಿಸಿದ್ದು, ಈ ಪೈಕಿ 10 ಮಂದಿಯ ಕೊರೊನಾ ವರದಿ ನೆಗಟಿವ್​​ ಬಂದಿರುವುದು ಜಿಲ್ಲೆಯ ಜನತೆಗೆ ಕೊಂಚ ನೆಮ್ಮದಿ ತರಿಸಿದಂತಾಗಿದೆ.

ರೂಪಾಂತರಗೊಂಡ ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಂಗ್ಲೆಂಡ್​​​​ನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ 15 ಮಂದಿ ಆಗಮಿಸಿದ್ದು, ಇದರಲ್ಲಿ 5 ಮಂದಿ ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ತೆರಳಿದ್ದಾರೆ. ಇನ್ನುಳಿದಂತೆ 10 ಮಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ವಾಬ್ ಟೆಸ್ಟ್ ನಡೆಸಿದ್ದು, ಈ 10 ಪ್ರಯಾಣಿಕರ ವರದಿ ನೆಗೆಟಿವ್ ಬಂದಿದೆ.

ರೂಪಾಂತರಗೊಂಡ ಕೊರೊನಾ ವೈರಸ್​​ನಿಂದ ಚಿಕ್ಕಬಳ್ಳಾಪುರ ಜಿಲ್ಲೆ ಸದ್ಯ ಸೇಫ್ ಆಗಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಇಂದಿರಾ ಕಬಾಡೆ ಸ್ಪಷ್ಟನೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈ 10 ಮಂದಿಗೆ ಹಾಗೂ ಅವರ ಕುಟುಂಬಸ್ಥರಿಗೆ 28 ದಿನಗಳ ಕಾಲ ಹೋಂ-ಕ್ವಾರಂಟೈನ್​​ನಲ್ಲಿರಲು ಜಿಲ್ಲಾ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.