ETV Bharat / state

ಚಾಮರಾಜನಗರದಲ್ಲಿಂದು ಒಂದೂ ಕೊರೊನಾ ಕೇಸ್‌ ಇಲ್ಲ.. ಸೋಂಕು ಮುಕ್ತವಾಗುವತ್ತ ಗಡಿ ಜಿಲ್ಲೆ

author img

By

Published : Jan 11, 2021, 8:50 PM IST

ಕೋವಿಡ್ ಮುಕ್ತವಾಗಿ ಹಸಿರು ವಲಯದಲ್ಲಿ ಚಾಮರಾಜನಗರ ಜಿಲ್ಲೆ ಗುರುತಿಸಿಕೊಂಡು ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಈಗ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 39ಕ್ಕಿಳಿದಿದೆ. ಮತ್ತೆ ಕೊರೊನಾ ಮುಕ್ತ ಜಿಲ್ಲೆಯಾಗುವ ನಿರೀಕ್ಷೆ ಜನರದ್ದಾಗಿದೆ..

ds
ಚಾಮರಾಜನಗರದಲ್ಲಿ ಶೂನ್ಯ ಕೊರೊನಾ ಕೇಸ್

ಚಾಮರಾಜನಗರ : ಜಿಲ್ಲೆಯಲ್ಲಿ ಕಳೆದ 7 ತಿಂಗಳ ಬಳಿಕ ಇಂದು ಜಿಲ್ಲೆಯಲ್ಲಿ ಒಂದೇ ಒಂದು ಕೋವಿಡ್ ಪಾಸಿಟಿವ್ ಕೇಸ್ ವರದಿಯಾಗದ ಕಾರಣ ಜನರು ಸಂತಸಗೊಂಡಿದ್ದಾರೆ.

ಭಾನುವಾರ ಸಂಗ್ರಹಿಸಲಾದ 393 ಜನರ ಗಂಟಲು ದ್ರವ ಮಾದರಿಯನ್ನು ಜಿಲ್ಲೆಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆರ್‌ಟಿಪಿಸಿಆರ್ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಟ್ಟು 393 ಗಂಟಲು ದ್ರವ ಮಾದರಿಯ ಪೈಕಿ ಯಾವುದೇ ಮಾದರಿಯಲ್ಲೂ ಕೋವಿಡ್-19 ಪತ್ತೆಯಾಗಿಲ್ಲ ಎಂದು ಆರ್‌ಟಿಪಿಸಿಆರ್ ಪ್ರಯೋಗಾಲಯದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಹೀಗಾಗಿ, ಇಂದು ಕಳೆದ 7 ತಿಂಗಳ ಬಳಿಕ ಯಾವುದೇ ಕೋವಿಡ್ ಪ್ರಕರಣ ವರದಿಯಾಗದ ಮೂಲಕ ರಾಜ್ಯದ ಗಮನಸೆಳೆದಿದೆ. ಮೊದಲು ಕೋವಿಡ್ ಪ್ರಕರಣ ರಾಜ್ಯದೆಲ್ಲೆಡೆ ಆರಂಭದಲ್ಲಿ ಕಂಡು ಬಂದಿತ್ತಾದ್ರೂ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಕಳೆದ 2020ರ ಜೂನ್ 7ರವರೆಗೆ ವರದಿಯಾಗಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.