ETV Bharat / state

ಅಕ್ರಮ ಸಂಬಂಧ ಶಂಕೆ: ಚಾಮರಾಜನಗರದಲ್ಲಿ ಯುವಕನ ಕೊಲೆ

ಅಕ್ರಮ ಸಂಬಂಧದ ಬಗ್ಗೆ ಶಂಕಿಸಿ ಯುವಕನೋರ್ವನನ್ನು ಹತ್ಯೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನಲ್ಲಿ ನಡೆದಿದೆ.

murder
ಕೊಲೆ
author img

By

Published : May 8, 2022, 9:40 AM IST

ಚಾಮರಾಜನಗರ: ವ್ಯಕ್ತಿಯೋರ್ವ ತನ್ನ ತಾಯಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿ‌ನ ಯಾನಗಳ್ಳಿಯಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ‌ ಯಾನಗಳ್ಳಿ ಗ್ರಾಮದ ಸಿದ್ದರಾಜು ಕೊಲೆಯಾದವ. ಮಣಿ ಎಂಬಾತ ಕೊಲೆ ಮಾಡಿರುವ ಆರೋಪಿ.

ತನ್ನ ತಾಯಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ದೊಣ್ಣೆಯಿಂದ ಸಿದ್ದರಾಜುವಿನ ತಲೆಗೆ ಆರೋಪಿ ಹೊಡೆದು ಬರ್ಬರವಾಗಿ ಕೊಂದು ಹಾಕಿದ್ದಾನೆ‌ ಎಂದು ತಿಳಿದುಬಂದಿದೆ. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬಟ್ಟೆ ತೊಳೆಯಲು ಬಂದು ಅತ್ತೆ, ಸೊಸೆ, ಮೊಮ್ಮಕ್ಕಳು ಸೇರಿ ಒಂದೇ ಕುಟುಂಬದ ಐವರು ನೀರುಪಾಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.