ETV Bharat / state

ಶೇ. 10ರಷ್ಟು ಮೀಸಲಾತಿಯಿಂದ ಸಂವಿಧಾನದ ಮೂಲತತ್ವವೇ ತಿರುಗು ಮುರುಗು: ಸಿದ್ದಲಿಂಗಯ್ಯ - chamrajnagar

ಸಂವಿಧಾನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗಷ್ಟೇ ಮೀಸಲಾತಿ ಕೊಟ್ಟಿರುವುದು. ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಮೀಸಲಾತಿ ಕಲ್ಪನೆ ಹುಟ್ಟಿಕೊಂಡಿತು. ಈಗ ಎಲ್ಲರನ್ನೂ ಸೇರಿಸಿಕೊಂಡಿರುವುದರಿಂದ ಗೊಂದಲ ಉಂಟಾಗಿದೆ ಎಂದು ಸಾಹಿತಿ ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

writer siddalingaiah
ಸಾಹಿತಿ ಸಿದ್ದಲಿಂಗಯ್ಯ
author img

By

Published : Mar 17, 2021, 9:53 PM IST

ಚಾಮರಾಜನಗರ: ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ಕೊಟ್ಟಿರುವುದು ಸಂವಿಧಾನದ ಮೂಲತತ್ವವನ್ನೇ ತಿರುಗು ಮುರುಗು ಮಾಡಿದೆ ಎಂದು ಕವಿ, ಸಾಹಿತಿ ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ಸಾಹಿತಿ ಸಿದ್ದಲಿಂಗಯ್ಯ

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಂವಿಧಾನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗಷ್ಟೇ ಮೀಸಲಾತಿ ಕೊಟ್ಟಿರುವುದು. ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಮೀಸಲಾತಿ ಕಲ್ಪನೆ ಹುಟ್ಟಿಕೊಂಡಿತು. ಈಗ ಎಲ್ಲರನ್ನೂ ಸೇರಿಸಿಕೊಂಡಿರುವುದರಿಂದ ಗೊಂದಲ ಉಂಟಾಗಿದೆ. ಕೇಂದ್ರ ಸರ್ಕಾರ ಏನು ಮಾಡುತ್ತದೆ ನೋಡಬೇಕು ಎಂದರು. ಇನ್ನು, ವಿವಿಧ ಜಾತಿಯ ಮಠಾಧೀಶರು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಬೀದಿಗಿಳಿದಿರುವುದು ಆಶ್ಚರ್ಯಕರ ಸಂಗತಿ. ಆಧ್ಯಾತ್ಮದಿಂದ ರಾಜಕಾರಣದತ್ತ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಹಲವಾರು ವಿಚಾರವಾದಿಗಳು ತಮ್ಮ ಬಗ್ಗೆ ಟೀಕೆ ಮಾಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿ, ನಾನು ಬಿಜೆಪಿಗೆ ಸೇರಿದ್ದೇನೆ ಎಂದು ಅವರು ಅಂದುಕೊಂಡಿರಬಹುದು‌. ನಾನು ಯಾವ ಪಾರ್ಟಿಗೂ ಸೇರಿಲ್ಲ. ನನ್ನ ಮನೆಗೆ ಪ್ರಧಾನಿ ಮತ್ತು ದೊಡ್ಡವರು ದಲಿತರು, ಹಿಂದುಳಿದವರ ಪರವಾಗಿ ಸಲಹೆ ಕೇಳಿದಾಗ ಕೊಡುವುದಿಲ್ಲ ಎಂದು ಹೇಳಲಾಗುವುದಿಲ್ಲ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ, ಕನ್ನಡದಲ್ಲೇ ಪರೀಕ್ಷೆ, ಅಟ್ರಾಸಿಟಿ ಕೇಸ್​​ ಬಲಪಡಿಸುವುದು ಸೇರಿದಂತೆ ಹಲವು ಸಲಹೆಗಳನ್ನು ಕೊಟ್ಟೆ. ಕೆಲವು ಜಾರಿಯಾಗಿವೆ. ನಾನು ದಲಿತ ಸಾಹಿತಿಯಾಗಿ ಸಲಹೆ ಕೊಟ್ಟಿದ್ದೇ ತಪ್ಪು ಎನ್ನುವುದು ಸರಿಯಲ್ಲ. ತಿಳುವಳಿಕೆ ಇಲ್ಲದೇ ಟೀಕಿಸಿರಬಹುದು. ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದರು.

ಓದಿ: ಡ್ರಗ್ಸ್ ಪ್ರಕರಣ: ಗೋವಿಂದಪುರ ಪೊಲೀಸ್ ಠಾಣೆಗೆ ಟಾಲಿವುಡ್ ನಟ ತನೀಶ್ ಹಾಜರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.