ETV Bharat / state

ವಿದ್ಯುತ್​ ಬಿಲ್​ ನೀಡಲು ಬಂದ ಸಿಬ್ಬಂದಿಗೆ ಮಹಿಳೆ ಮತ್ತು ರೈತ ಮುಖಂಡರಿಂದ ತರಾಟೆ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ​ಕಾಂಗ್ರೆಸ್​​ 200 ಯುನಿಟ್​ ಉಚಿತ ವಿದ್ಯುತ್ ​ಘೋಷಣೆ ಮಾಡಿರುವ ಬೆನ್ನಲ್ಲೇ ವಿದ್ಯುತ್​ ಬಿಲ್​ ನೀಡಲು ಬಂದ ಸಿಬ್ಬಂದಿಯೊಂದಿಗೆ ಕೆಲವರು ಮಾತಿನ ಚಕಮಕಿ ನಡೆಸುತ್ತಿದ್ದಾರೆ.

women-and-farmer-leaders-refuses-to-pay-the-electricity-bill
ವಿದ್ಯುತ್​ ಬಿಲ್​ ನೀಡಲು ಬಂದ ಸಿಬ್ಬಂದಿಗೆ ಮಹಿಳೆ ಮತ್ತು ರೈತ ಮುಖಂಡರಿಂದ ತರಾಟೆ
author img

By

Published : May 17, 2023, 5:44 PM IST

Updated : May 17, 2023, 6:47 PM IST

ಚಾಮರಾಜನಗರ : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಜೊತೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದೆ. ಈ ಬೆನ್ನಲ್ಲೇ ವಿದ್ಯುತ್​ ಬಿಲ್​ ನೀಡಲು ಹೋದ ವೇಳೆ ಬಿಲ್​ ಕಟ್ಟುವುದಿಲ್ಲ ಎಂದು ಹೇಳುತ್ತಿರುವ ಘಟನೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಇಂತಹ ಘಟನೆಯ ವಿಡಿಯೋ ವೈರಲ್​ ಆಗಿತ್ತು.

ಇದೀಗ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮಕ್ಕೆ ವಿದ್ಯುತ್ ಬಿಲ್ ನೀಡಲು ತೆರಳಿದ್ದ ಸೆಸ್ಕ್ ಸಿಬ್ಬಂದಿಗೆ ರೈತ ಮುಖಂಡರು ತಪರಾಕಿ ಹಾಕಿ ಕಳುಹಿಸಿದ್ದಾರೆ.

ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವವರಗೂ ನಾವು ಬಿಲ್ ಪಡೆಯುವುದಿಲ್ಲ. ಸಿಬ್ಬಂದಿಗಳು ಬಿಲ್ ಕೊಡುವುದಕ್ಕೂ ಬಿಡುವುದಿಲ್ಲ. ಕಾಂಗ್ರೆಸ್ ಭರವಸೆ ಬಗ್ಗೆ ನಂಬಿಕೆ ಇಟ್ಟು ಜಿಲ್ಲೆಯ 4 ಕ್ಷೇತ್ರಗಳಲ್ಲಿ ಮೂವರು ಕಾಂಗ್ರೆಸ್ ಶಾಸಕರನ್ನು ಆರಿಸಿ ಕಳುಹಿಸಿದ್ದೇವೆ. ಐದು ಗ್ಯಾರಂಟಿಗಳಲ್ಲಿ ಉಚಿತ ವಿದ್ಯುತ್ ಗ್ಯಾರಂಟಿಯನ್ನು ತಕ್ಷಣ ಜಾರಿಗೆ ತರಬೇಕೆಂದು ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಒತ್ತಾಯಿಸಿದರು.

ರಾಯಚೂರಿನಲ್ಲಿ ಮಹಿಳೆಯಿಂದ ತರಾಟೆ : ವಿದ್ಯುತ್​ ಬಿಲ್ ನೀಡಲು ಬಂದ ಜೆಸ್ಕಾಂ ಸಿಬ್ಬಂದಿಗೆ ಮಹಿಳೆಯೋರ್ವರು ತರಾಟೆ ತೆಗೆದುಕೊಂಡಿರುವ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಇದು ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದಿದೆ ಎನ್ನಲಾಗಿದೆ.

ವಿಡಿಯೋದಲ್ಲಿ ಮಹಿಳೆಯು ಮಸ್ಕಿ ಶಾಸಕರು ಚುನಾವಣಾ ಪ್ರಚಾರಕ್ಕೆ ಬಂದಾಗ ಕರೆಂಟ್ ಬಿಲ್ ಕಟ್ಟಬೇಡಿ ಎಂದಿದ್ದಾರೆ. ಹೀಗಾಗಿ ನಾವು ಬಿಲ್​ ಕಟ್ಟುವುದಿಲ್ಲ ಎಂದು ಮಹಿಳೆ ವಿಡಿಯೋದಲ್ಲಿ ವಾದಿಸಿರುವುದು ಸೆರೆಯಾಗಿದೆ.

ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆಯಲ್ಲಿ ವಿದ್ಯುತ್​ ಬಿಲ್​ ಕೊಡಲು ಹೋದ ಸಿಬ್ಬಂದಿಗೆ ಕೆಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.ಕಾಂಗ್ರೆಸ್​ ಬಹುಮತ ಪಡೆದಿದ್ದು, ಸರ್ಕಾರ ರಚಿಸಲಿದೆ. ಕಾಂಗ್ರೆಸ್​ ನಾಯಕರು ನಮಗೆ ಐದು ಗ್ಯಾರಂಟಿಗಳು ಇರುವ ಕಾರ್ಡ್​ಅನ್ನು ಕೊಟ್ಟಿದ್ದಾರೆ. ''ಕಟ್ಟಲ್ಲ ರೀ ನಾವ್ ಬಿಲ್ ಕಟ್ಟಲ್ಲ'' ಎಂದು ಕಡ್ಡಿ ತುಂಡಾದಂತೆ ಹೇಳಿದ್ದರು. ವಿದ್ಯುತ್​ ಇಲಾಖೆ ಸಿಬ್ಬಂದಿ ಸರ್ಕಾರದಿಂದ ಇನ್ನೂ ನಮಗೆ ಆದೇಶ ಬಂದಿಲ್ಲ. ಅಲ್ಲಿಂದ ಆದೇಶ ಬಂದ್ರೆ ಬಿಲ್​ ಕೊಡಲ್ಲ ಎಂದು ಸಿಬ್ಬಂದಿ ಎಷ್ಟೇ ಹೇಳಿದ್ರು ಅವರ ಮಾತಿಗೆ ಗ್ರಾಮಸ್ಥರು ಸೊಪ್ಪು ಹಾಕಿರಲಿಲ್ಲ.

ಕಾಂಗ್ರೆಸ್​ ಗ್ಯಾರಂಟಿ ಯೋಜನೆಯಲ್ಲಿ ಏನೇನಿದೆ.. ನಿರುದ್ಯೋಗಿ ಪದವಿಧರರಿಗೆ ತಿಂಗಳಿಗೆ 3000 ಭತ್ಯೆ, ಡಿಪ್ಲೋಮಾ ಓದಿದ ಯುವಕರಿಗೆ 1500 ರೂ., ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ, ಪ್ರತಿ ಕುಟುಂಬದ ಒಡತಿಗೆ 2000 ರೂ. ಮಾಶಾಸನ, 10 ಕೆಜಿ ಉಚಿತ ಅಕ್ಕಿ ಕೊಡುವುದಾಗಿ ಕಾಂಗ್ರೆಸ್​ ನಾಯಕರು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಅಲ್ಲದೆ, ಸರ್ಕಾರ ರಚನೆಯಾದ ಬಳಿಕ ಮೊದಲ ಕ್ಯಾಬಿನೆಟ್​ ಸಭೆಯಲ್ಲೇ ಈ ಯೋಜನೆಗಳಿಗೆ ಅನುಮೋದನೆ ನೀಡುವುದಾಗಿ ಹೇಳಿದ್ದಾರೆ. ​

ಇದನ್ನೂ ಓದಿ : ಸಿದ್ದರಾಮಯ್ಯಗೆ ಸಿಎಂ ಸ್ಥಾನ ಖಚಿತ, ಬಳ್ಳಾರಿಯಲ್ಲಿ 101 ತೆಂಗಿನ ಕಾಯಿ ಒಡೆದು ಸಂಭ್ರಮಾಚರಣೆ

Last Updated : May 17, 2023, 6:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.