ETV Bharat / state

ಸಿಎಂ ಆದ್ರೆ ಚಾಮರಾಜನಗರಕ್ಕೆ ಹೋಗ್ತಾರಾ ಯಡಿಯೂರಪ್ಪ?

author img

By

Published : Jul 26, 2019, 3:23 AM IST

ಯಡಿಯೂರಪ್ಪ ಅವರೇ ಮತ್ತೊಂದು ಅವಧಿಗೆ ಸಿಎಂ ಆಗ್ತಾರೆ ಎಂದು ಹೇಳಲಾಗ್ತಿದೆ. ಈ ಮಧ್ಯೆ ಯಡಿಯೂರಪ್ಪ ಸಿಎಂ ಆದರೂ ಚಾಮರಾಜನಗರಕ್ಕೆ ಬಂದು, ನಗರಕ್ಕೆ ಅಂಟಿರುವ ಕಳಂಕವನ್ನು ಮತ್ತೊಮ್ಮೆ ದೂರ ಮಾಡ್ತಾರಾ ಎಂಬ ಚರ್ಚೆಯೂ ಜೋರಾಗಿ ನಡೆಯುತ್ತಿದೆ.

ಯಡಿಯೂರಪ್ಪ

ಚಾಮರಾಜನಗರ: ಇಲ್ಲಿಗೆ ಬಂದ್ರೆ ಸಿಎಂ ಸ್ಥಾನ ಕಳೆದುಕೊಳ್ತಾರೆ ಎಂಬ ಮೂಢನಂಬಿಕೆಯನ್ನು ಈ ಬಾರಿಯಾದರೂ ಯಡಿಯೂರಪ್ಪ ಮುರಿಯುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ.

ಹೌದು, ಸಮ್ಮಿಶ್ರ ಸರ್ಕಾರದ ಅಂತ್ಯದ ನಂತರ ಬಿಜೆಪಿ ಸರ್ಕಾರ ರಚನೆ ಮಾಡಲಿದ್ದು, ಯಡಿಯೂರಪ್ಪ ಅವರೇ ಮತ್ತೊಂದು ಅವಧಿಗೆ ಸಿಎಂ ಆಗ್ತಾರೆ ಎಂದು ಹೇಳಲಾಗ್ತಿದೆ. ಈ ಮಧ್ಯೆ ಯಡಿಯೂರಪ್ಪ ಸಿಎಂ ಆದರೂ ಚಾಮರಾಜನಗರಕ್ಕೆ ಬಂದು, ನಗರಕ್ಕೆ ಅಂಟಿರುವ ಕಳಂಕವನ್ನು ಮತ್ತೊಮ್ಮೆ ದೂರ ಮಾಡ್ತಾರಾ ಎಂಬ ಚರ್ಚೆಯೂ ಜೋರಾಗಿ ನಡೆಯುತ್ತಿದೆ.

ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಜಿಲ್ಲಾ ಕೇಂದ್ರಕ್ಕೆ ಒಮ್ಮೆಯೂ ಭೇಟಿ ನೀಡಿರಲಿಲ್ಲ. ಚಾಮರಾಜನಗರದ ಸಂತೇಮರಹಳ್ಳಿ, ಕೊಳ್ಳೇಗಾಲ, ಗುಂಡ್ಲುಪೇಟೆಗೆ ಸಾಕಷ್ಟು ಬಾರಿ ಬಂದಿದ್ದ ಅವರು, ನಗರದ ಕಡೆ ಬರುವ‌ ಮನಸ್ಸು ಮಾಡಿರಲಿಲ್ಲ. ಇದಕ್ಕೆ ಕಾರಣ ಅಧಿಕಾರ ಕಳೆದುಕೊಳ್ಳುವ ಭಯ ಎಂಬುದು ಜನರ ಮಾತು.

ಇನ್ನು ಚಾಮರಾಜನಗರಕ್ಕೆ ಅಂಟಿರುವ ಕಳಂಕವನ್ನು ದೂರ ಮಾಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಸಿಎಂ ಆಗಿದ್ದ ವೇಳೆ 7 ಬಾರಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ, ಚಾಮರಾಜನಗರದ ಬಗ್ಗೆ ಇದ್ದ ಮೂಢನಂಬಿಕೆಯನ್ನು ಮುರಿದಿದ್ದರು. ಅಲ್ಲದೆ, ತಾನು ಚಾಮರಾಜನಗರಕ್ಕೆ ಭೇಟಿ ನೀಡಿದ ಬಳಿಕವೇ ಸಿಎಂ ಆದೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಹೇಳಿಕೆ ನೀಡಿದ್ದರು. ಈ ನಿದರ್ಶನಗಳಿದ್ದರೂ ಸಿಎಂ ಆಗಲಿರುವ ಯಡಿಯೂರಪ್ಪ ಜಿಲ್ಲೆಗೆ ಬರ್ತಾರಾ? ಎಂಬ ಮಾತುಗಳು ಹರಿದಾಡುತ್ತಿವೆ.

Intro:ಅಧಿಕಾರದಲ್ಲಿದ್ದಾಗ ಒಮ್ಮೆಯೂ ಚಾಮರಾಜನಗರಕ್ಕೆ ಬರದ ಬಿಎಸ್ ವೈ: ಈ ಬಾರಿಯಾದರೂ ಬರ್ತಾರಾ?

ಚಾಮರಾಜನಗರ: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೂಢನಂಬಿಕೆಯನ್ನು ಭಾವಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಲವಾಗಿ ನಂಬಿದಂತಿದೆ.

Body:ಹೌದು, ಬಿಎಸ್ವೈ ಅಧಿಕಾರದಲ್ಲಿದ್ದಾಗ ಒಮ್ಮೆಯೂ ಜಿಲ್ಲಾಕೇಂದ್ರಕ್ಕೆ ಭೇಟಿ ಕೊಟ್ಟಿಲ್ಲ. ಪಕ್ಕದ ಸಂತೇಮರಹಳ್ಳಿ, ಕೊಳ್ಳೇಗಾಲ, ಗುಂಡ್ಲುಪೇಟೆಗೆ ಸಾಕಷ್ಟು ಬಾರಿ ಬಂದಿರುವ ಯಡಿಯೂರಪ್ಪ ಚಾಮರಾಜನಗರಕ್ಕೆ ಬರುವ‌ ಮನಸ್ಸು ಮಾಡೇ ಇಲ್ಲ.

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೂಢನಂಬಿಕೆಯನ್ನು
ಮಾಜಿ ಸಿಎಂ ಸಿದ್ದರಾಮಯ್ಯ ತೊಲಗಿಸಿದ್ದು, ಸಿದ್ದರಾಮಯ್ಯ ಸಿಎಂ ಆದ ವೇಳೆ ೬-೭ ಬಾರಿ ಜಿಲ್ಲಾಕೇಂದ್ರಕ್ಕೆ ಭೇಟಿ ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ನಾನು ಚಾಮರಾಜನಗರಕ್ಕೆ ಭೇಟಿ ನೀಡಿದ ಬಳಿಕವೇ ಸಿಎಂ ಆದೇ ಎಂದು ಶೆಟ್ಟರ್ ಹೇಳಿಕೆ ನೀಡಿದ್ದರು. ಈ ನಿದರ್ಶನಗಳ ನಡುವೆ ಸಿಎಂ ಆದ ಬಳಿಕ ಬಿಎಸ್ ವೈ ಚಾಮರಾಜನಗರಕ್ಕೆ ಭೇಟಿ ಕೊಡುವರೇ ಕಾದು ನೋಡಬೇಕು.Conclusion:ವಿಪಕ್ಷ ನಾಯಕ ಹಾಗೂ ಅಧಿಕಾರ ಇಲ್ಲದಿದ್ದ ವೇಳೆ ಜಿಲ್ಲಾಕೇಂದ್ರಕ್ಕೆ ಬಂದಿರುವ ಯಡಿಯೂರಪ್ಪ ಈ ಬಾರಿ ಮುಖ್ಯಮಂತ್ರಿ ಗಾದಿಗೆ ಏರಿದ ಮೇಲೆ ಜಿಲ್ಲಾಕೇಂದ್ರಕ್ಕೆ ಭೇಟಿ ನೀಡುವ ಮನಸು ಮಾಡುವರೇ ಎಂಬುದನ್ಜು ಕಾಲವೇ ನಿರ್ಧರಿಸಬೇಕಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.