ಚಾಮರಾಜನಗರ: ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಸ್ಥಾನ ಬದಲಾಗಿದ್ದರಿಂದ ಪಂಚಾಯತ್ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇಂದು ಅದೇ ಪಂಚಾಯತ್ ಅಧ್ಯಕ್ಷನಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಪಿ.ಜಿ.ಪಾಳ್ಯ ಗ್ರಾ.ಪಂಗೆ ಬುಧವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ನಂಜಪ್ಪ ಎಂಬುವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಗ್ರಾಪಂ ಅಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.
24 ಸದಸ್ಯರ ಬಲಾಬಲವನ್ನು ಹೊಂದಿರುವ ಗ್ರಾಮ ಪಂಚಾಯತ್ ಸದಸ್ಯ ಸ್ಥಾನದಲ್ಲಿ ಜೆಡಿಎಸ್ ಬೆಂಬಲಿತ 15 ಸದಸ್ಯರು ಆಯ್ಕೆಯಾಗಿದ್ದು, ಪಕ್ಷದ ಆಂತರಿಕ ಒಪ್ಪಂದದಂತೆ ನಂಜಪ್ಪ ಅಧ್ಯಕ್ಷರಾದರು. ಇದೇ ಗ್ರಾಮ ಪಂಚಾಯತಿಯಲ್ಲಿ ಕಳೆದ 2 ವರ್ಷದ ಹಿಂದೆ 5 ವರ್ಷಗಳ ಕಾಲ ನೂತನ ಅಧ್ಯಕ್ಷ ನಂಜಪ್ಪ ಅವರು ನೀರುಗಂಟಿಯಾಗಿ ಕೆಲಸ ಮಾಡಿದ್ದರು.
ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಮಹಿಳೆಯರ ಕಿತ್ತಾಟ, ವೇಶ್ಯಾವಾಟಿಕೆ ವಿಚಾರಕ್ಕೆ ಜಗಳ ಶಂಕೆ.. ವಿಡಿಯೋ ವೈರಲ್