ETV Bharat / state

ಸ್ವಯಂ ಪ್ರೇರಿತವಾಗಿ ಗ್ರಾಮದ ರಸ್ತೆ‌ ಬಂದ್ ಮಾಡಿದ‌ ಮಹಿಳೆಯರು ...! - Thimmarajipura village

ಚಾಮರಾಜನಗರ ಜಿಲ್ಲಾದ್ಯಂತ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಕೊಳ್ಳೇಗಾಲ ತಾಲೂಕಿನ ತಿಮ್ಮರಾಜೀಪುರ ಮಹಿಳೆಯರು ಸ್ವತಃ ಗ್ರಾಮದ ರಸ್ತೆ ಬಂದ್ ಮಾಡಿಕೊಂಡಿದ್ದಾರೆ.

village in kollegala take into self lockdown for COVID 19 fear
ಕೊರೊನಾ ಭೀತಿ ಗ್ರಾಮದ ರಸ್ತೆಯ‌ ಬಂದ್ ಮಾಡಿದ‌ ಮಹಿಳೆಯರು
author img

By

Published : Jul 10, 2020, 2:14 PM IST

ಕೊಳ್ಳೇಗಾಲ: ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿರುವುದರಿಂದ ಇಲ್ಲಿನ ಹಲವಾರು ಗ್ರಾಮಸ್ಥರು ಸ್ವಯಂ ಲಾಕ್​ಡೌನ್​​ಗೆ ಮುಂದಾಗಿದ್ದು, ಬೆಂಗಳೂರು ಹಾಗೂ ಮೈಸೂರಿನಿಂದ ಬರುವ ಜನಗಳಿಗೆ ನಿರ್ಬಂಧ ಹೇರಿದ್ದಾರೆ.

ಸ್ವಯಂಪ್ರೇರಿತರಾಗಿ ಗ್ರಾಮದ ರಸ್ತೆಯ‌ ಬಂದ್ ಮಾಡಿದ‌ ಮಹಿಳೆಯರು
ಒಂದು‌ ವೇಳೆ ಊರೊಳಗೆ ಪ್ರವೇಶಿಸುವುದಾದರೆ ಕೊರೊನಾ ತಪಾಸಣೆ ಮಾಡಿಸಿಕೊಂಡು ನೆಗೆಟಿವ್​​ ವರದಿ ದೃಢಪಡಿಸಿಕೊಂಡು‌ ಬರಬೇಕು ಎಂಬ ಕಟ್ಟುನಿಟ್ಟಿನ ನಿರ್ಬಂಧ ಮಾಡಿಕೊಂಡಿದ್ದಾರೆ.
ಆಯಾ ಗ್ರಾಮಗಳಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವವರನ್ನು ಊರಿಗೆ ಸೇರಿಸಿಕೊಳ್ಳಬಾರದು. ಒಂದು ವೇಳೆ ಸೇರಿಸಿ‌ಕೊಂಡರೆ 10 ಸಾವಿರ ರೂ ದಂಡ ಎಂಬ ಕ್ರಮಗಳನ್ನು ಮುಖಂಡರು ತೆಗೆದುಕೊಂಡಿದ್ದಾರೆ. ಕೊಳ್ಳೇಗಾಲ ಸುತ್ತಮುತ್ತಲು ದಿನೇ ದಿನೆ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಎಚ್ಚೆತ್ತ ಇಲ್ಲಿನ ತಿಮ್ಮರಾಜೀಪುರ ಗ್ರಾಮದ ಮಹಿಳೆಯರು ತಮ್ಮ ಗ್ರಾಮದ ರಸ್ತೆಯನ್ನು ವಿದ್ಯುತ್‌ ಕಂಬ ಅಡ್ಡಲಾಗಿ ಹಾಕುವ ಮೂಲಕ‌ ಬಂದ್ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.