ETV Bharat / state

ಗ್ರಾಮ ಲೆಕ್ಕಿಗನಿಂದ ವೃದ್ಧಾಶ್ರಮದಲ್ಲಿ ದೀಪಾವಳಿ.. ಕುಟುಂಬಸ್ಥರಿಂದ ದೂರಾದ ಹಿರಿಯರ ಬಾಳಲ್ಲಿ ಮೂಡಿತು ಬೆಳಕು

ಸಂತೇಮರಹಳ್ಳಿಯಲ್ಲಿನ ಜ್ಞಾನಸಿಂಧು ವೃದ್ಧಾಶ್ರಮದಲ್ಲಿ ಶುಕ್ರವಾರ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಹಿರಿಯ ಜೀವಗಳ ಜೊತೆ ದೀಪಾವಳಿ ಆಚರಿಸಿ ಸಿಹಿ ಹಂಚಿಸಿದರು.

Village accountant celebrated deepawali in Old age home
ಗ್ರಾಮ ಲೆಕ್ಕಿಗನಿಂದ ವೃದ್ಧಾಶ್ರಮದಲ್ಲಿ ದೀಪಾವಳಿ
author img

By

Published : Nov 6, 2021, 8:21 AM IST

Updated : Nov 6, 2021, 10:11 AM IST

ಚಾಮರಾಜನಗರ: ತನ್ನ ಕುಟುಂಬ, ಮಕ್ಕಳು ಎಲ್ಲವನ್ನೂ ಬಿಟ್ಟು ಯಾರೂ ಇಲ್ಲದೆಯೇ ಬದುಕು ಸಾಗಿಸುತ್ತಿರುವ ಹಿರಿಯ ಜೀವಗಳ ಜೊತೆಗೆ ಗ್ರಾಮ ಲೆಕ್ಕಿಗನೋರ್ವ ದೀಪಾವಳಿ ಆಚರಿಸುವ ಮೂಲಕ, ಅವರ ಮೊಗದಲ್ಲಿ ಮಂದಹಾಸ ಮೂಡಿಸಿದ್ದಾರೆ.

ಸಂತೇಮರಹಳ್ಳಿಯಲ್ಲಿನ ಜ್ಞಾನಸಿಂಧು ವೃದ್ಧಾಶ್ರಮದಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟಿತ್ತು. ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮ ಲೆಕ್ಕಿಗ ಶ್ರೀಧರ್ ​ಅಲ್ಲಿಗೆ ತೆರಳಿ, ಅಲ್ಲಿರುವ 24 ಮಂದಿ ಹಿರಿಯ ನಾಗರಿಕರಿಗೆಲ್ಲರಿಗೂ ಹಣ್ಣು, ಸಿಹಿ ವಿತರಿಸಿ ಅಕ್ಕಿ ಚೀಲ ವಿತರಿಸಿದರು. ಜೊತೆಗೆ ದಾನಿಗಳ‌ ಸಹಾಯದಿಂದ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ.

ಗ್ರಾಮ ಲೆಕ್ಕಿಗನಿಂದ ವೃದ್ಧಾಶ್ರಮದಲ್ಲಿ ದೀಪಾವಳಿ

ಕುಟುಂಬದ ಸದಸ್ಯರೊಂದಿಗೆ ದೀಪದ ಹಬ್ಬ ಆಚರಿಸಬೇಕಿದ್ದ ಹಿರಿಯ ಜೀವಗಳು ಅನಿವಾರ್ಯವಾಗಿ ವೃದ್ಧಾಶ್ರಮ ಸೇರಿ ಪರಿತಪಿಸುವಂತಾಗಿತ್ತು. ಆದರೆ ಗ್ರಾಮ ಲೆಕ್ಕಿಗ ಶ್ರೀಧರ್ ಹಿರಿಯರ ಬಾಳಲ್ಲಿ ಮತ್ತೆ ಬೆಳಕು ಮೂಡಿಸಿರುವುದು ಶ್ಲಾಘನೀಯ.

ಓದಿ: ಪಟಾಕಿ ಹಚ್ಚುವುದು, ಮಾರಾಟ ನಿಷೇಧ.. ಸುಪ್ರೀಂ ಆದೇಶ ಉಲ್ಲಂಘಿಸಿದ 281 ಜನರ ಬಂಧನ

Last Updated : Nov 6, 2021, 10:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.