ETV Bharat / state

ಸಾಲು ಸಾಲು ರಜೆ ಊಟಿ ಕಡೆ ಮುಖ ಮಾಡಿದ ಪ್ರವಾಸಿಗರು : ಚೆಕ್​ ಪೋಸ್ಟ್​ ಬಳಿ ವಾಹನಗಳು ಜಾಮ್​

ಮೂರು ದಿನಗಳ ರಜೆ ಹಿನ್ನಲೆ ಪ್ರವಾಸಿಗರು ಊಟಿ ಕಡೆ ಮುಖಮಾಡಿದ್ದು, ತಮಿಳುನಾಡಿನ ಕೆಕ್ಕನಹಳ್ಳ ಚೆಕ್​ಪೋಸ್ಟ್​ ಬಳಿ ವಾಹನಗಳ ಇ-ಪಾಸ್ ಪರಿಶೀಲನೆಗೆ ಸಮಯ ಹಿಡಿಯುವುದರಿಂದ ಸುಮಾರು ಕಿಲೋಮೀಟರ್​ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ..

vehicles jam
ವಾಹನಗಳು ಜಾಮ್​
author img

By

Published : Dec 26, 2020, 1:01 PM IST

ಗುಂಡ್ಲುಪೇಟೆ : ಕ್ರಿಸ್‌ಮಸ್ ರಜೆ​ ಹಾಗೂ ವೀಕೆಂಡ್​ ಎರಡೂ ಒಟ್ಟಿಗೆ ಬಂದ ಕಾರಣ ಸತತವಾಗಿ ಮೂರು ದಿನಗಳ ಕಾಲ ರಜೆ ಇರುವುದರಿಂದ ಜನರು ಪ್ರವಾಸಿ ತಾಣಗಳ ಕಡೆ ಮುಖ ಮಾಡಿದ್ದು, ಇಂದು ರಾಷ್ಟ್ರೀಯ ಹೆದ್ದಾರಿ (ಊಟಿ)ಯ ಚೆಕ್​ ಪೋಸ್ಟ್​ ಬಳಿ ವಾಹನಗಳು ಸಾಲುಗಟ್ಟಿ ನಿಂತಿವೆ.

ತಮಿಳುನಾಡು ಪ್ರವೇಶ ಪಡೆಯಬೇಕಾದ್ರೆ ಇ-ಪಾಸ್ ಅಗತ್ಯ, ಪಾಸ್ ಇಲ್ಲದೆ ವಾಹನಗಳನ್ನು ತಮಿಳುನಾಡಿನ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಬಂಡೀಪುರದ ಬಳಿ ಇರುವ ಮೇಲುಕಾಮನಹಳ್ಳಿ ಚೆಕ್​ಪೋಸ್ಟ್​ನಲ್ಲಿ ಪಾಸ್ ಇದ್ದರೆ ಮಾತ್ರವೇ ವಾಹನಗಳನ್ನು ಒಳಗೆ ಬಿಡಲಾಗುತ್ತಿದೆ.

ಸಾಲುಗಟ್ಟಿ ನಿಂತಿರುವ ವಾಹನಗಳು

ಆದರೂ ಅನೇಕರು ಪ್ರಯಾಣ ಮಾಡುವ ಮಾರ್ಗ ಮದ್ಯದಲ್ಲಿ ಆನ್​ಲೈನ್​ ಮುಖಂತರ ಪಾಸ್ ಪಡೆದು ಹೋಗುತ್ತಾರೆ. ತಮಿಳುನಾಡಿನ ಕೆಕ್ಕನಹಳ್ಳ ಚೆಕ್​ಪೋಸ್ಟ್​ ಬಳಿ ಪಾಸ್ ಪರಿಶೀಲನೆ ಮತ್ತು ತಪಾಸಣೆಗೆ ಸಮಯ ಹಿಡಿಯುವುದರಿಂದ ವಾಹನಗಳು ಸುಮಾರು ಕಿಲೋಮೀಟರ್​ವರೆಗೂ ಸಾಲುಗಟ್ಟಿ ನಿಂತಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.