ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ ಆಗಮಿಸಬೇಕು, ತಾಳವಾಡಿ ಕರ್ನಾಟಕಕ್ಕೆ ಸೇರಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರು.
ತಮಿಳುನಾಡಿನ ತಾಳವಾಡಿ ಕರ್ನಾಟಕದ್ದು .. ರಸ್ತೆಯಲ್ಲಿ ಮಲಗಿ ವಾಟಾಳ್ ಪ್ರತಿಭಟನೆ
ತಾಳವಾಡಿಯಲ್ಲಿರುವವರು ಅಪ್ಪಟ ಕನ್ನಡಿಗರಾದ್ದರಿಂದ ಆ ಭಾಗ ನಮ್ಮ ರಾಜ್ಯಕ್ಕೆ ಸೇರಬೇಕು ಎಂದು ಒತ್ತಾಯಿಸಿ ವಾಟಾಳ್ ನಾಗರಾಜ್ ಚಾಮರಾಜನಗರದಲ್ಲಿಂದು ರಸ್ತೆಯಲ್ಲಿಯೇ ಮಲಗಿ ವಿನೂತನ ರೀತಿ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆಯಲ್ಲಿ ಮಲಗಿ ವಾಟಾಳ್ ಪ್ರತಿಭಟನೆ
ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ ಆಗಮಿಸಬೇಕು, ತಾಳವಾಡಿ ಕರ್ನಾಟಕಕ್ಕೆ ಸೇರಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಮಲಗಿ ಪ್ರತಿಭಟಿಸಿದರು.
ಕಳೆದ ವಾರ ತಮಿಳು ಬೋರ್ಡ್ ತೆರವುಗೊಳಿಸಿದ್ದರ ಬಗ್ಗೆ ಮಾತನಾಡಿ, ತಮಿಳಿಗರಿಂದ ಅನೇಕ ಕರೆಗಳು ಬರುತ್ತಿದ್ದು, ಅವಾಚ್ಯ ಪದ ಬಳಕೆಯಾಗುತ್ತಿದೆ. ಅವರ ಗೊಡ್ಡು ಬೆದರಿಕೆಗೆಲ್ಲಾ ಹೆದರುವ ವ್ಯಕ್ತಿ ನಾನಲ್ಲ. ಚಾಮರಾಜನಗರದ ಗಡಿ ಸರ್ವೆ ಆಗಬೇಕು, ತಾಳವಾಡಿ ಮತ್ತು ಊಟಿ ಕರ್ನಾಟಕಕ್ಕೆ ಸೇರಬೇಕೆಂದು ಆಗ್ರಹಿಸಿದರು.
'ನನ್ನ ಕೊನೆ ಉಸಿರು ಇರುವ ತನಕ ಕನ್ನಡಕ್ಕಾಗಿ ಹೋರಾಡುತ್ತೇನೆ'. ತಾಳವಾಡಿಯಲ್ಲಿರುವವರು ಅಪ್ಪಟ ಕನ್ನಡಿಗರಾದ್ದರಿಂದ ಆ ಭಾಗ ನಮ್ಮ ರಾಜ್ಯಕ್ಕೆ ಸೇರಲೇಬೇಕು. ಇದಕ್ಕಾಗಿ, ಫೆ.13 ರಂದು ಚಾಮರಾಜನಗರ ಗಡಿಯನ್ನು ಬಂದ್ ಮಾಡಿ ಪ್ರತಿಭಟಿಸುತ್ತೇನೆ ಎಂದು ತಿಳಿಸಿದರು.ಇನ್ನು ರಸ್ತೆಯಲ್ಲಿಯೇ ಮಲಗಿ ಪ್ರತಿಭಟಿಸಿದ್ದರಿಂದ ಅರ್ಧ ತಾಸಿಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.