ETV Bharat / state

ತಾಳವಾಡಿ ಕರ್ನಾಟಕ ಸೇರ್ಪಡೆಗೆ ಒತ್ತಾಯ; ಚಾಮರಾಜನಗರಕ್ಕೆ ವಾಟಾಳ್ ರ‍್ಯಾಲಿ

ತಮಿಳುನಾಡಿನಲ್ಲಿರುವ ತಾಳವಾಡಿ ಮತ್ತು ಊಟಿ ಕರ್ನಾಟಕಕ್ಕೆ ಸೇರಬೇಕೆಂದು ಒತ್ತಾಯಿಸಿ ವಾಟಾಳ್ ನಾಗರಾಜ್ ಬೆಂಗಳೂರಿನಿಂದ ಚಾಮರಾಜನಗರದ ಪುಣಜನೂರಿಗೆ ಕಾರ್ ರ‍್ಯಾಲಿ ನಡೆಸಿದರು.

vatal nagaraj
ಣಜನೂರಿಗೆ ಕಾರ್ ರ‍್ಯಾಲಿ
author img

By

Published : Feb 10, 2021, 7:41 PM IST

ಚಾಮರಾಜನಗರ: ತಮಿಳುನಾಡಿಗೆ ಒಳಪಟ್ಟಿರುವ ತಾಳವಾಡಿ ಮತ್ತು ಊಟಿ ಕರ್ನಾಟಕಕ್ಕೆ ಸೇರಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಬೆಂಗಳೂರಿನಿಂದ ಚಾಮರಾಜನಗರದ ಪುಣಜನೂರಿಗೆ ಕಾರ್ ರ‍್ಯಾಲಿ ನಡೆಸಿದರು.

ತೆರೆದ ವಾಹನದಲ್ಲಿ ಚಾಮರಾಜನಗರಕ್ಕೆ ಆಗಮಿಸಿದ ವಾಟಾಳ್ ನಾಗರಾಜ್ ಅವರನ್ನು ಅಭಿಮಾನಿಗಳು ಪಟಾಕಿ ಸಿಡಿಸಿ ಬರಮಾಡಿಕೊಂಡರು. ನಂತರ ಸುಮಾರು 40ಕ್ಕೂ ಹೆಚ್ಚು ವಾಹನಗಳೊಂದಿಗೆ ಜೋಡಿರಸ್ತೆಯ ಮೂಲಕ ರಾಮಸಮುದ್ರಕ್ಕೆ ತೆರಳಿ ಅಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಪುಣಜನೂರಿಗೆ ತೆರಳಿದರು.

ಣಜನೂರಿಗೆ ಕಾರ್ ರ‍್ಯಾಲಿ

ಮೆರವಣಿಗೆ ಉದ್ದಕ್ಕೂ ತಾಳವಾಡಿ, ಸೊಲ್ಲಾಪುರ, ಊಟಿ ನಮ್ಮದು ಎಂದು ಘೋಷಣೆ ಕೂಗಿದ ಹೋರಾಟಗಾರರು ಚಾಮರಾಜನಗರ ಗಂಡು ಮೆಟ್ಟಿದ ನೆಲಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಏಕೆ ಬರಲಿಲ್ಲ. ನಾನು ಶಾಸಕನಾಗಿದ್ದರೆ ಓಡೋಡಿ ಬರಬೇಕಿತ್ತು. ಆ ರೀತಿಯಾಗಿ ಕೆಲಸ ಮಾಡುತ್ತಿದ್ದೆ ಎಂದು ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದರು‌.

ತಾಳವಾಡಿ ಕರ್ನಾಟಕಕ್ಕೆ ಸೇರಬೇಕೆಂದು ಹೋರಾಟ ಮಾಡಿ ನನ್ನ ಬಂಧನವಾಯಿತು. ಆ ವೇಳೆಯಲ್ಲೂ‌ ನಾನು ಹೆದರದೇ ಚಳವಳಿ ನಡೆಸಿ ಕನ್ನಡ ಪರ ಹೋರಾಟ ಮಾಡಿದೆ. ಈಗಲೂ ಸಹ ತಾಳವಾಡಿ ಕರ್ನಾಟಕಕ್ಕೆ ಸೇರಿದ ಪ್ರದೇಶವಾಗಿದೆ. ಹೀಗಾಗಿ ಇಂದು ಚಾಮರಾಜನಗರದಿಂದ ಪುಣಜೂರಿನವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿದ್ದೇವೆ. ಕನ್ನಡ ನೆಲಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಗುಡುಗಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.