ETV Bharat / state

ಭಾರತ್ ಬಂದ್​ಗೆ ವಾಟಾಳ್ ಬೆಂಬಲ: ರಾಜ್ಯ ಬಂದ್ ವಿಫಲಕ್ಕೆ ಪೊಲೀಸರ ವಿರುದ್ಧ ಆಕ್ರೋಶ

ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಅಂದು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತೇನೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

vatal-nagaraj-
ವಾಟಾಳ್ ನಾಗರಾಜ್
author img

By

Published : Dec 6, 2020, 11:06 PM IST

ಚಾಮರಾಜನಗರ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ಕರೆ ನೀಡಿದ್ದ ಬಂದ್ ವಿಫಲಗೊಳಿಸಲು ಯಡಿಯೂರಪ್ಪ ಸತತ ಪ್ರಯತ್ನ ನಡೆಸಿದರು. ಪೊಲೀಸರು ಬಿಎಸ್​ವೈ ಅವರ ಪಕ್ಷದವರಾಗಿದ್ದರು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎಲ್ಲರನ್ನು ಹೆದರಿಸಿ ಮಾರ್ಕೆಟ್​ಗಳನ್ನು ತೆರೆಸಿದರು. ಪೊಲೀಸರು ಇದರ ಜವಾಬ್ದಾರಿ ಹೊತ್ತಿದ್ದರು. ಓಲಾ- ಉಬರ್ ಕೂಡ ಬೆಂಬಲ ನೀಡಿತ್ತು. ಸರ್ಕಾರಕ್ಕೆ ಹೆದರಿ ಕೊನೆಗೆ ಅವರು ರಸ್ತೆಗಿಳಿದರು. ಕಮ್ಯುನಿಸ್ಟ್ ಪಕ್ಷ ಕಾರ್ಮಿಕರನ್ನು ಕೆಲಸಕ್ಕೆ ಕಳುಹಿಸುವ ಮೂಲಕ ಬಿಜೆಪಿ ತೀರ್ಮಾನ ಬೆಂಬಲಿಸಿ ತಮ್ಮ ಸಿದ್ಧಾಂತಕ್ಕೆ ದ್ರೋಹ ಬಗೆದರು ಎಂದು ಕಿಡಿಕಾರಿದರು.

ವಾಟಾಳ್ ನಾಗರಾಜ್
ಓದಿ: ಸಭಾಪತಿ ಬದಲಾವಣೆ ವಿಚಾರದಲ್ಲಿ ನಮ್ಮ ರಾಜಕೀಯ ಬದ್ಧತೆ ಬದಲಾಗಲ್ಲ: ಡಿಕೆಶಿ

ಬೆಳಗಾವಿ ಚುನಾವಣೆಯಲ್ಲಿ ರಕ್ತ ಸಂಬಂಧಿಗಳನ್ನು ಗೆಲ್ಲಿಸಲು ಯಡಿಯೂರಪ್ಪ ಕರ್ನಾಟಕವನ್ನು ಹರಾಜಿಗೆ ಹಾಕಿದರು.‌ ಪ್ರಾಧಿಕಾರ ರದ್ದಾಗುವ ತನಕ ಹೋರಾಟ ನಿಲ್ಲುವುದಿಲ್ಲ. ಬುಧವಾರದಂದು ಕನ್ನಡಪರ ಸಂಘಟನೆಗಳ ಸಭೆ ಕರೆದು ಮುಂದಿನ ಹೋರಾಟ ರೂಪಿಸಲಾಗುವುದು. ಈ ವಿಚಾರದಲ್ಲಿ ಜೈಲಿಗೆ ಹೋಗಲು ಸಿದ್ಧ ಎಂದ ಅವರು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 5-6 ದಿನ ಬಂದ್ ಮಾಡಿದ್ದೇವೆ. ಆದರೆ, ಅವರು ಎಂದೂ ಹೋರಾಟಕ್ಕೆ ಅಡ್ಡಿಪಡಿಸಲಿಲ್ಲ ಎಂದು ಬಿಎಸ್​ವೈ ವಿರುದ್ಧ ಕಿಡಿಕಾರಿದರು‌.

ಇದೇ ವೇಳೆ, ವಿವಿಧ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ಅಂದು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತೇನೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.