ETV Bharat / state

ಮೇಕೆದಾಟಿಗೆ ಸಚಿವ ಉಮೇಶ್ ಕತ್ತಿ ಭೇಟಿ.. ಯೋಜನೆ ಮಾಡೇ ಮಾಡುತ್ತೇವೆಂದು ಶಪಥ

ಮೇಕೆದಾಟಿಗೆ ಉಮೇಶ್ ಕತ್ತಿ ಭೇಟಿ ನೀಡಿ, ಯೋಜನೆ ಆಗಲೇಬೇಕು. ಮಾಡೇ ಮಾಡುತ್ತೇವೆಂದು ಸಚಿವ ಉಮೇಶ್ ಕತ್ತಿ ತಿಳಿಸಿದರು.

Umesh Katti visited to Mekedatu
ಮೇಕೆದಾಟಿಗೆ ಉಮೇಶ್ ಕತ್ತಿ ಭೇಟಿ
author img

By

Published : Aug 7, 2022, 7:42 PM IST

ಚಾಮರಾಜನಗರ: ಹನೂರು ತಾಲೂಕಿನ ಮೇಕೆದಾಟು ಪ್ರದೇಶಕ್ಕೆ ಸಚಿವ ಉಮೇಶ್ ಕತ್ತಿ ಭೇಟಿ ನೀಡಿದರು. ಮೇಕೆದಾಟು ಯೋಜನೆ ಕುಡಿಯುವ ನೀರಿಗೆ ಸಂಬಂಧಿಸಿದ್ದು. ಆ ಯೋಜನೆ ಆಗಲೇಬೇಕು. ಮಾಡೇ ಮಾಡುತ್ತೇವೆ. ಸರ್ಕಾರ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದೆ. ತಮಿಳುನಾಡಿಗೂ ವಿನಂತಿ ಮಾಡುತ್ತಿದ್ದೇವೆ. ಮೇಕೆದಾಟು ಯೋಜನೆಯಾದರೆ ಬೆಂಗಳೂರು, ಚಾಮರಾಜನಗರಕ್ಕೆ ನೆರವಾಗಲಿದೆ ಎಂದು ತಿಳಿಸಿದರು.

Umesh Katti visited to Mekedatu
ಮೇಕೆದಾಟಿಗೆ ಉಮೇಶ್ ಕತ್ತಿ ಭೇಟಿ

ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಟೈಗರ್‌ ರಿಸರ್ವ್(ಹುಲಿ ಸಂರಕ್ಷಿತ ಪ್ರದೇಶ) ಮಾಡುವುದು‌ ಸಿಎಂ ತೀರ್ಮಾನ. ಅವರ ನಿಲುವೇ ಅಂತಿಮ. ಮಲೆಮಹದೇಶ್ವರ ವನ್ಯಜೀವಿಧಾ‌ಮ ಅನುಮೋದನೆಗೊಂಡು ರಾಜ್ಯ ಸರ್ಕಾರಕ್ಕೆ ಬಂದಿದೆ. ಸೋಮಣ್ಣ ಬೇಡ ಎನ್ನುವುದು, ನಾನು ಬೇಕು ಎನ್ನುವುದರಿಂದ ಏನು ಆಗಲ್ಲ. ಸಂಪುಟ ಸಭೆಯಲ್ಲಿ ಸಿಎಂ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಹೇಳಿದರು.‌

ಮೇಕೆದಾಟಿಗೆ ಉಮೇಶ್ ಕತ್ತಿ ಭೇಟಿ

ಇದನ್ನೂ ಓದಿ: ದೇಶದ ಹದಗೆಟ್ಟ ವ್ಯವಸ್ಥೆ ಸರಿಪಡಿಸಲು ಯಾರಿಗೂ ಸಾಧ್ಯ ಇಲ್ಲ: ನಟ ಪ್ರಕಾಶ್ ರಾಜ್​​​

ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಒಂದಾದ ಹೊಗೆನಕಲ್ ಜಲಪಾತವನ್ನು ಅಭಿವೃದ್ಧಿಪಡಿಸಲಾಗುವುದು. ವೀಕ್ಷಣಾ ಗೋಪುರ ಹಾಗೂ ಸೇತುವೆ ನಿರಂತರ ಮಳೆಯಿಂದ ಹಾನಿಯಾಗಿದ್ದು, ಶೀಘ್ರ ಕಾಮಗಾರಿ ಕೈಗೊಂಡು ಸರಿಪಡಿಸಲಾಗುವುದು. ಇನ್ನೂ ಕಾಡೊಳಗಿನ ಗ್ರಾಮ ಚಂಗಡಿ ಜನರಿಗೆ ಪುನರ್ವಸತಿ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಇನ್ನೆರೆಡು ತಿಂಗಳುಗಳಲ್ಲಿ ಅಂತಿಮವಾಗಲಿದೆ ಎಂದು ಸಚಿವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.