ETV Bharat / state

ಚಾಮರಾಜನಗರ: ಕಾಡಾನೆ, ಕರಡಿ ದಾಳಿಯಿಂದ ಇಬ್ಬರು ರೈತರಿಗೆ ಗಂಭೀರ ಗಾಯ.. - etv bharat kannada

ಚಾಮರಾಜನಗರದಲ್ಲಿ ಕಾಡಾನೆ ಮತ್ತು ಕರಡಿ ದಾಳಿಯಿಂದಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Etv Bharattwo-farmers-injured-in-elephant-and-bear-attack
Etv Bharatಚಾಮರಾಜನಗರ:ಕಾಡಾನೆ, ಕರಡಿ ದಾಳಿಯಿಂದ ಇಬ್ಬರು ರೈತರಿಗೆ ಗಂಭೀರ ಗಾಯ...
author img

By

Published : Dec 15, 2022, 2:20 PM IST

ಚಾಮರಾಜನಗರ: ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕೊಕ್ಕಬರೆ ಗ್ರಾಮದ ಬಳಿ ನಡೆದಿದೆ.

ಕೊಕ್ಕಬರೆ ಗ್ರಾಮದ ಪುಟ್ಟಸ್ವಾಮಿ ಎಂಬವರು ಗಾಯಗೊಂಡಿದ್ದಾರೆ. ಕಾರ್ಯ ನಿಮಿತ್ತವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಪುಟ್ಟಸ್ವಾಮಿ ಹಿಂತಿರುಗುವಾಗ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಎರಡು ಕಾಲಿನ ಮೂಳೆ ಮುರಿದಿದೆ.

ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಅವರಿಗೆ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೆಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನೊಂದೆಡೆ, ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪ ದನಗಳನ್ನು ಮೇಯಿಸುವಾಗ ಕರಡಿಯೊಂದು ದಾಳಿ ಮಾಡಿದ ಪರಿಣಾಮ ಬೆಳ್ಳಿತಂಬಡಿ ಎಂಬವರು ಗಾಯಗೊಂಡಿದ್ದಾರೆ. ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ತುಮಕೂರು: ರೈತರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಬೋನ್​ನಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.