ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ಮಂಗಳವಾರ ತಡರಾತ್ರಿವರೆಗೆ ನಡೆದಿದ್ದು, 1,71,00,458 ರೂ. ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
![tresure count function in the Malemahadeshwara Hills](https://etvbharatimages.akamaized.net/etvbharat/prod-images/kn-cnr-01-hundi-av-7202614_29012020082459_2901f_1580266499_692.jpg)
ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದಂದು ಕ್ಷೇತ್ರಕ್ಕೆ ಭಕ್ತ ಸಮೂಹ ಹರಿದು ಬಂದಿದ್ದರಿಂದ 1,71,00,458 ಕಾಣಿಕೆ ಸಂಗ್ರಹವಾಗಿದ್ದು, 72 ಗ್ರಾಂ ಚಿನ್ನ ಮತ್ತು 1,400 ಗ್ರಾಂ ಬೆಳ್ಳಿಯನ್ನು ಭಕ್ತರು ಹರಕೆ ರೂಪದಲ್ಲಿ ಮಹದೇಶ್ವರನಿಗೆ ಸಲ್ಲಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 31 ಲಕ್ಷ ರೂ. ಹೆಚ್ಚು ಸಂಗ್ರಹವಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜೈ. ವಿಭವಸ್ವಾಮಿ ತಿಳಿಸಿದ್ದಾರೆ.