ಚಾಮರಾಜನಗರ: ದಶಕದ ದಾಖಲೆಯ ಮಳೆಗೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ(Tamilnadu Rain) ತಾಳವಾಡಿ ಭಾಗದ ವಿವಿಧ ಗ್ರಾಮಗಳು ತತ್ತರಿಸಿದ್ದು, ಸಂಚಾರ ಅಸ್ತವ್ಯಸ್ತವಾಗಿದ್ದ ಘಟನೆ ಶನಿವಾರ ಸಂಜೆ ನಡೆದಿದೆ.
ಡಾ.ರಾಜ್ ಕುಮಾರ್ ಅವರ " ಸಂಪತ್ತಿಗೆ ಸವಾಲ್" ಚಿತ್ರದ ಶೂಟಿಂಗ್ ನಡೆದಿದ್ದ ಚಿಕ್ಕಳ್ಳಿ ಸೇತುವೆ ಮೇಲೆ 5-6 ಅಡಿ ನೀರು ರಭಸದಿಂದ ಹರಿಯುತ್ತಿದ್ದು, ಎರಡೂವರೆ ತಾಸಿಗೂ ಹೆಚ್ಚು ಕಾಲ ಸೇತುವೆ ಮೇಲಿನ ಸಂಚಾರ ದುಸ್ತರವಾಗಿತ್ತು. ತಾಸುಗಟ್ಟಲೇ ಕಾದ ವಾಹನ ಸವಾರರು ನೀರಿನ ಹರಿವು ಕಡಿಮೆಯಾದ ಮೇಲೆ ತೆರಳಿರುವುದಾಗಿ ಚಿಕ್ಕಳ್ಳಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಕನ್ನಡಿಗರೇ ಹೆಚ್ಚಿರುವ ತಮಿಳುನಾಡಿನ ಚಿಕ್ಕಳ್ಳಿ, ಗುಮಟಾಪುರ, ಇಗ್ಗಲೂರು, ತಲೈಮಲೈ, ಜೀರ್ಕಳ್ಳಿ, ತಿನ್ನಾರೆ ಗ್ರಾಮಗಳಿಗೆ ಸಂಚಾರ ಕಡಿತಗೊಂಡು ಕಿ.ಮೀ.ಗಟ್ಟಲೇ ಲಾರಿ, ಕಾರು ಹಾಗೂ ಬೈಕ್ ಗಳು ಸಂಚರಿಸಲಾಗದೇ ನಿಂತಿದ್ದು ಕಂಡುಬಂತು.
ಪ್ರವಾಹ ಪರಿಸ್ಥಿತಿಯಂತೆ ನೀರು ಹರಿದ ಪರಿಣಾಮ ನೂರಾರು ಎಕರೆ ಪ್ರದೇಶ ರಾಗಿ ಬೆಳೆ ನಾಶವಾಗಿದೆ ಎಂದು ತಿಳಿದುಬಂದಿದೆ. ದಶಕದ ಮಹಾಮಳೆಗೆ ತಮಿಳುನಾಡು ಕನ್ನಡಿಗರು ಸಹ ತತ್ತರಿಸಿದ್ದಾರೆ.