ಚಾಮರಾಜನಗರ: ಭಾನುವಾರ ಆಯುಧ ಪೂಜೆ ರಜೆ. ನಾಳೆ ವಿಜಯದಶಮಿ, ಹೀಗೆ ಸಾಲು ಸಾಲು ರಜೆ ಹಿನ್ನೆಲೆ ಬಂಡೀಪುರಕ್ಕೆ ಪ್ರವಾಸಿಗರು ಲಗ್ಗೆ ಹಾಕಿದ್ದಾರೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಅರಣ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಇಂದು ಒಂದೇ ದಿನಕ್ಕೆ ಅಂದಾಜು 5 ಲಕ್ಷ ರೂಪಾಯಿಗೂ ಹೆಚ್ಚಿನ ಆದಾಯ ಬಂದಿದೆ ಎಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಬಂಡೀಪುರ ಸಫಾರಿ ಕೌಂಟರ್, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸುತ್ತಮುತ್ತಲಿನ ರೆಸಾರ್ಟ್‌ಗಳು ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ಕಳೆದ ಎರಡು ದಿನಗಳಿಂದ ಹುಲಿ, ಚಿರತೆ, ಆನೆಹಿಂಡು, ಸೀಳುನಾಯಿಗಳು ಸಹ ಕಾಣಸಿಕ್ಕಿವೆ. ವಿಜಯದಶಮಿ ದಿನದಂದು ವಿಶ್ವಪ್ರಸಿದ್ಧ ಅಂಬಾರಿ ಕಾಣಲು ಪ್ರವಾಸಿಗರು ಮುಗಿಬೀಳುವುದರಿಂದ ಸಫಾರಿಗೆ ಬರುವವರ ಸಂಖ್ಯೆಯಲ್ಲಿ ಇಳಿಮುಖವಾಗಬಹುದು ಎಂಬುದು ಇಲಾಖೆಯ ಅಂದಾಜಾಗಿದೆ.