ETV Bharat / state

ಲಾಕ್​ಡೌನ್​ ಸಮಯದ ಸದುಪಯೋಗ: ಚಾಮರಾಜನಗರದ ಚಿಣ್ಣರಿಂದ ಕಠಿಣ ಯೋಗಾಭ್ಯಾಸ - Tough yoga practised by Chinnarajanagara childrens

ಸಂತೋಷದಿಂದಲೇ ಬೆಳಗ್ಗೆ ಮತ್ತು ಸಂಜೆ ಯೋಗಾಭ್ಯಾಸ ಮಾಡುತ್ತಿದ್ದೇವೆ. ಯೋಗ ಮಾಡಲು ಮುಂಜಾನೆ ಬೇಗ ಏಳುವುದು ರೂಢಿಯಾಗಿದೆ. ನೃತ್ಯ ಮಾಡಲು ಆಸನಗಳು ಸಹಾಯಕವಾಗಿವೆ ಎಂದು ಚಾಮರಾಜನಗರದ ಚಿಣ್ಣರು ಮತ್ತು ಯೋಗ ಶಿಕ್ಷಕಿಯರು ಈಟಿವಿ ಭಾರತದೊಂದಿಗೆ ಯೋಗದ ಅನುಕೂಲತೆ ಕುರಿತು ಮಾತನಾಡಿದ್ದಾರೆ.

Tough yoga practised by Chinnarajanagara childrens
ಚಾಮರಾಜನಗರದ ಚಿಣ್ಣರಿಂದ ಕಠಿಣ ಯೋಗಾಭ್ಯಾಸ
author img

By

Published : Jun 21, 2020, 1:16 PM IST

ಚಾಮರಾಜನಗರ: ಲಾಕ್​ಡೌನ್​ ಸಮಯದಲ್ಲಿ ಕೇವಲ ಸಿನಿಮಾ, ಆಟದ ಕಡೆ ಒಲವನ್ನು ಹರಿಸುವ ಮಕ್ಕಳ ನಡುವೆ ಜಿಲ್ಲೆಯಲ್ಲಿನ ಚಿಣ್ಣರು ಉತ್ತಮ ಜೀವನ ಶೈಲಿಗೆ ಉಪಯುಕ್ತವಾದ ಯೋಗಾಸನಗಳನ್ನು ಕಲಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಗರದ ಕಲಾ ಸರಸ್ವತಿ ನಾಟ್ಯ ಸಂಸ್ಥೆಯ 50 ಕ್ಕೂ ಹೆಚ್ಚು ನೃತ್ಯ ವಿದ್ಯಾರ್ಥಿಗಳು ಲಾಕ್​ಡೌನ್​​ ವೇಳೆ ಸರಳ ಯೋಗಾಸನಗಳನ್ನು ಕಲಿಯುವ ಮೂಲಕ ಇದೀಗ ನಿರಂತರ ಪ್ರಯತ್ನದ ಫಲವಾಗಿ ಕಠಿಣ ಆಸನಗಳನ್ನೂ ಕಲಿತಿದ್ದಾರೆ. ನೃತ್ಯ ಮಾಡಲು ದೇಹ ಬಳಕುವಂತೆ ಮಾಡಲು-ಆಲಸ್ಯ ತೊಲಗಿಸಿ ಅಧ್ಯಯನ ಮಾಡಲು ಈ ಮಕ್ಕಳು ಯೋಗದ ದಾರಿ ಕಂಡುಕೊಂಡಿದ್ದಾರೆ.

ಚಾಮರಾಜನಗರದ ಚಿಣ್ಣರಿಂದ ಕಠಿಣ ಯೋಗಾಭ್ಯಾಸ
ಲಾಕ್​ಡೌನ್​ ವೇಳೆ ಶಾಲೆಗಳಿಲ್ಲವಾದ್ದರಿಂದ ಸಾಮಾಜಿಕ‌ ಅಂತರ ಕಾಯ್ದುಕೊಂಡು, ಮುಖಕ್ಕೆ ಮಾಸ್ಕ್ ಧರಿಸಿ ಮಕ್ಕಳು ಯೋಗ ಕಲಿಯುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳುವ ಜೊತೆಗೆ ಉಸಿರಾಟ ಪ್ರಕ್ರಿಯೆ, ಧ್ಯಾನ, ನೃತ್ಯಕ್ಕೆ ಸಹಾಯಕವಾದ ಆಸನಗಳನ್ನು ಕಲಿತುಕೊಂಡಿದ್ದಾರೆ.‌ ಈ ವೇಳೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಶುಚಿತ್ವದ ಕುರಿತು ನಾಟ್ಯ ಶಾಲೆ ಮಕ್ಕಳಿಗೆ ಅರಿವು ಮೂಡಿಸಿದೆ.
Tough yoga practised by Chinnarajanagara childrens
ಕಠಿಣ ಯೋಗಾಭ್ಯಾಸದಲ್ಲಿ ನಿರತರಾದ ಮಕ್ಕಳು
ಸರಳ ಪದಗಳು: ಮತ್ಸ್ಯಾಸನಕ್ಕೆ ಮೀನಿನಾಕಾರ, ಮಕರಾಸನಕ್ಕೆ ಮೊಸಳೆ ಆಕಾರ, ವೃಕ್ಷಾಸನಕ್ಕೆ ಮರ ಎಂದು ಹೆಸರಿಸಿ ಆಸನದ ಹೆಸರಿನೊಂದಿಗೆ ಪ್ರಾಣಿ-ಪಕ್ಷಿಗಳ ಹೆಸರನ್ನು ಹೇಳುವ ಮೂಲಕ ಚಿಣ್ಣರಿಗೆ ಅರ್ಥವಾಗುವ ರೀತಿಯಲ್ಲಿ ನಾಟ್ಯಶಾಲೆ ವಿವಿಧ ಯೋಗಾಸನದ ಭಂಗಿಗಳನ್ನು ಹೇಳಿಕೊಟ್ಟಿದೆ‌.

ಈ ಕುರಿತು, ವೃತ್ತಿಯಲ್ಲಿ ವೈದ್ಯೆಯಾಗಿರುವ ನೃತ್ಯ ಪಟು, ಯೋಗಶಿಕ್ಷಕಿ ಡಾ. ಉಮಾರಾಣಿ ಈಟಿವಿ ಭಾರತದೊಂದಿಗೆ ಮಾತನಾಡಿ, ಲಾಕ್​ಡೌನ್​ನಲ್ಲಿ ಸೀಮಿತ ಚಿಣ್ಣರಿಗೆ ಮಾತ್ರ ಯೋಗ ಕಲಿಸಿದ್ದು, ಇದರಿಂದಾಗಿ ಮಕ್ಕಳು ಉತ್ಸಾಹದಿಂದ ಕಲಿತಿದ್ದಾರೆ. ಇದು ಅವರ ಆರೋಗ್ಯಕ್ಕೆ, ಓದಿಗೆ ಮುಖ್ಯವಾಗಿ ಭರತನಾಟ್ಯಕ್ಕೆ ಸಹಕಾರಿಯಾಗಿದೆ. ‌ಪ್ರಾಣಿ- ಪಕ್ಷಿಗಳ ಹೆಸರುಗಳ‌ ಮೂಲಕ ಆಸನಗಳನ್ನು ಅಭ್ಯಾಸ ಮಾಡಿಸಿದ್ದೇವೆ. ಈಗ ಯೋಗಾಸನವನ್ನು ಮಕ್ಕಳು ಗಂಭೀರವಾಗಿ ತೆಗೆದುಕೊಂಡು ಸಂತಸದಿಂದಲೇ ಕಲಿಯುತ್ತಿದ್ದಾರೆ ಎಂದರು.
ನಾಲ್ಕು ವರ್ಷದ ಪ್ರಾಚಿ ಜೈನ್ ಎಂಬ ಪುಟಾಣಿಗೂ ಈ ವೇಳೆ ಯೋಗ ಕಲಿಸಲು ಆರಂಭಿಸಿದ್ದು, ಈ‌‌ ಮಗು ಕೂಡ ಹಲವು ಆಸನಗಳನ್ನು ಪ್ರದರ್ಶಿಸುತ್ತಿದೆ. ಪುಟ್ಟ ವಯಸ್ಸಿನಲ್ಲಿಯೇ ಯೋಗ ಹೇಳಿಕೊಡುವುದರಿಂದ ಉತ್ತಮ ಜೀವನಶೈಲಿಯನ್ನು ಬೆಳೆಸಿದಂತಾಗುತ್ತದೆ. ಯೋಗ ಎಂದರೆ ಆರೋಗ್ಯ, ಯೋಗ ಎಂದರೆ ನಮ್ಮ ದೇಹಕ್ಕೊಂದು ಶಕ್ತಿ ಎನ್ನುತ್ತಾರೆ ನೃತ್ಯ ಶಾಲೆಯ ಪ್ರಾಂಶುಪಾಲೆ ಡಾ. ಅಕ್ಷತಾ ಜೈನ್.

ಯೋಗಾಭ್ಯಾಸದಲ್ಲಿರುವ ಮಗು
ಶಾಲೆಯಲ್ಲಿ ಉಚಿತವಾಗಿ ನೃತ್ಯದೊಂದಿಗೆ ಯೋಗಾಸನ ಕಲಿಸುತ್ತಿದ್ದು, ಸಂಸ್ಕೃತಿ ಉಳಿಸುವ ಜೊತೆಗೆ ಆರೋಗ್ಯಕರ ಸಮಾಜ ಸೃಷ್ಟಿಸುವ ಧ್ಯೇಯ ಈ ಸಂಸ್ಥೆಯದ್ದಾಗಿದೆ. ಮುಂದಿನ ವರ್ಷದ ಯೋಗ ದಿನಾಚರಣೆ ವೇಳೆ ಶಾಲೆಯ ಪುಟಾಣಿಗಳಿಂದಲೇ ಯೋಗ ಪ್ರದರ್ಶನ ಮಾಡುವಷ್ಟರ ಮಟ್ಟಿಗೆ ಕಲಿಸಬೇಕೆನ್ನುವ ಗುರಿ ಸಂಸ್ಥೆಯದ್ದಾಗಿದೆ.
ಯೋಗದಿಂದ ಆಲಸ್ಯವೇ ಇಲ್ಲ: ಯೋಗಾಭ್ಯಾಸದ ಕುರಿತು ಚಿಣ್ಣರು ಮಾತನಾಡಿ, ಸಂತೋಷದಿಂದಲೇ ಬೆಳಗ್ಗೆ ಮತ್ತು ಸಂಜೆ ಯೋಗಾಭ್ಯಾಸ ಮಾಡುತ್ತಿದ್ದೇವೆ. ಯೋಗ ಮಾಡಲು ಮುಂಜಾನೆ ಬೇಗ ಏಳುವುದು ರೂಢಿಯಾಗಿದೆ. ನೃತ್ಯ ಮಾಡಲು ಆಸನಗಳು ಸಹಾಯಕವಾಗಿವೆ. ಯೋಗ ಮಾಡುವುದನ್ನು ಕಲಿತ ಮೇಲೆ ಆಲಸ್ಯವೇ ಇಲ್ಲದಂತಾಗುತ್ತದೆ, ನಮಗೂ ಇದು ಅನುಭವಕ್ಕೆ ಬಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.