ETV Bharat / state

ಚಿರತೆ ಸಾವು, 9 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ ಸೇರಿದಂತೆ ಚಾಮರಾಜನಗರದ ಇಂದಿನ ಕ್ರೈಂ ನ್ಯೂಸ್ - ಚಾಮರಾಜನಗರದಲ್ಲಿ ಗೃಹಿಣಿ ಆತ್ಮಹತ್ಯೆ

ಚಾಮರಾಜನಗರ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ 9 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ ಇದರೊಟ್ಟಿಗೆ, ಅನುಮಾನಾಸ್ಪದ ರೀತಿಯಲ್ಲಿ ಚಿರತೆ, ಸವಾರ ಮೃತಪಟ್ಟಿದ್ದಾರೆ.

ಗೃಹಿಣಿ ಆತ್ಮಹತ್ಯೆ
ಗೃಹಿಣಿ ಆತ್ಮಹತ್ಯೆ
author img

By

Published : Mar 15, 2022, 7:37 PM IST

ಚಾಮರಾಜನಗರ: ವರದಕ್ಷಿಣೆ ಮತ್ತು ಶೀಲ ಶಂಕೆಗೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದ ಬಸ್ತಿಪುರದಲ್ಲಿ ನಡೆದಿದೆ. ತನ್ನ 9 ತಿಂಗಳ‌ ಮಗುವನ್ನು ಬಿಟ್ಟು ವಿದ್ಯಾಶ್ರೀ ಎಂಬಾಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಸಂಬಂಧ ಹನೂರು ತಾ.ಪಂ.ನಲ್ಲಿ ಪಿ.ಡಿ.ಓ ಆಗಿರುವ ಆನಂದ್ ಕಾಂಬ್ಳೆ ಮತ್ತು ಇವರ ತಂದೆ ಶ್ಯಾಮ್ ಅವರನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ಪ್ರತಿದಿನ ಕುಡಿದು ಬಂದು ತನ್ನ ಮಗಳ ಶೀಲ ಶಂಕಿಸಿ ವರದಕ್ಷಿಣೆ ಕಿರುಕುಳ ಕೊಡುತ್ತಿದ್ದ, ತನ್ನ ಮಗಳನ್ನು ಹೊಡೆದು ಸಾಯಿಸಿ ನೇಣು ಬಿಗಿದು ಆತ್ಮಹತ್ಯೆಯ ಕಥೆ ಕಟ್ಟಿದ್ದಾರೆಂದು ಮೃತಳ ತಂದೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಹೂವಿನ‌ ವ್ಯಾಪಾರಿ ಸಾವು: ಅಪರಿಚಿತ ವಾಹನ‌ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ‌ ಕೋಡಿಉಗನೆ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರದ ಭಗಿರಥನಗರ ನಿವಾಸಿ ರವಿ (41) ಎಂಬವರು ಮೃತ ವ್ಯಕ್ತಿ. ಈತ ವ್ಯಾಪಾರಕ್ಕೆಂದು ತೆರಳಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ಅಪರಿಚಿತ ವಾಹನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಅನುಮಾನಾಸ್ಪದ ರೀತಿಯಲ್ಲಿ ಚಿರತೆ ಶವ ಪತ್ತೆ: ಚಿರತೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಳ್ಳದ ಮಾದಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗಮಲ್ಲಪ್ಪ ಎಂಬವರ ಜಮೀನಿನಲ್ಲಿ ಹೆಣ್ಣು ಚಿರತೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಹಳ್ಳದ ಮಾದಹಳ್ಳಿ ಗ್ರಾಮವು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ಜೋನಿನ ವ್ಯಾಪ್ತಿಗೆ ಒಳಪಡಲಿದೆ.

ಕಳಪೆ ರಸಗೊಬ್ಬರ ಪೂರೈಕೆ ಆರೋಪ
ಕಳಪೆ ರಸಗೊಬ್ಬರ ಪೂರೈಕೆ ಆರೋಪ

ಕಳಪೆ ರಸಗೊಬ್ಬರ ಪೂರೈಕೆ ಆರೋಪ: ಬೆಳೆಗಳಿಗೆ ರಸಗೊಬ್ಬರ ಹಾಕಿ ಎರಡು ದಿನಗಳಾದರೂ ಕರಗದಿದ್ದರಿಂದ ರೈತರೊಬ್ಬರು ಪೊಲೀಸರು ಮತ್ತು ಕೃಷಿ ಅಧಿಕಾರಿಗಳಿಗೆ ದೂರು ನೀಡಿರುವ ಘಟನೆ ನಡೆದಿದೆ.

ಬೇಗೂರಿನ ರಾಘವೇಂದ್ರ ಎಂಟರ್ ಪ್ರೈಸಸ್ ಎಂಬ ಮಳಿಗೆ ವಿರುದ್ಧ ನಂಜನಗೂಡು ತಾಲೂಕಿನ ಚಿನಕುರಳಿ ಗ್ರಾಮದ ರೈತ ಮಹೇಶ್ ಕಳಪೆ ರಸಗೊಬ್ಬರದ ದೂರು ನೀಡಿದ್ದು ಅಂಗಡಿ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ದೂರು ಪಡೆದ ಬೇಗೂರು ಪೊಲೀಸರು ಮತ್ತು ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ಅಂಗಡಿಗೆ ಭೇಟಿ ಕೊಟ್ಟು ಪೂರೈಕೆಯಾಗುತ್ತಿದ್ದ ರಸಗೊಬ್ಬರದ ಸ್ಯಾಂಪಲನ್ನು ಮಂಡ್ಯ ಜಿಲ್ಲೆಯ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ‌. ವರದಿ ಬಂದ ನಂತರ ಕ್ರಮ ಕೈಗೊಳ್ಳಲಿದ್ದು, ಅಲ್ಲಿಯ ತನಕ ರಸಗೊಬ್ಬರ ಮಾರಾಟ ಮಾಡದಂತೆ ಮಾಲೀಕನಿಗೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.