ETV Bharat / state

ಮಲೆಮಹದೇಶ್ವರ ದೇವಾಲಯ ದರ್ಶನದ ಸಮಯ ವಿಸ್ತರಣೆ, ವಾಸ್ತವ್ಯಕ್ಕೂ ಅವಕಾಶ

ದೇವರ ದರ್ಶನದ ಸಮಯ ವಿಸ್ತರಣೆ ಮತ್ತು ವಾಸ್ತವ್ಯಕ್ಕಷ್ಟೇ ಅವಕಾಶ ನೀಡಲಾಗಿದೆ. ಆದರೆ ದಾಸೋಹ ಸೌಲಭ್ಯ, ಮುಡಿಸೇವೆ, ಲಾಡು ಪ್ರಸಾದ ವಿತರಣೆ ಸೇರಿದಂತೆ ದೇಗುಲದಲ್ಲಿನ ಸೇವಾ ಉತ್ಸವಗಳು, ವಿಶೇಷ ಪೂಜೆಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Male Mahadeshwara temple
ಮಲೆಮಹದೇಶ್ವರ ದೇವಾಲಯ
author img

By

Published : Jul 8, 2021, 5:34 PM IST

ಚಾಮರಾಜನಗರ: ಅನ್​ಲಾಕ್ 3.0ನ ಪರಿಷ್ಕೃತ ಮಾರ್ಗಸೂಚಿಯಂತೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ದರ್ಶನದ ಸಮಯ ವಿಸ್ತರಣೆಯಾಗಿದ್ದು ವಾಸ್ತವ್ಯಕ್ಕೂ ಅವಕಾಶ ನೀಡಲಾಗಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಇದ್ದ ದರ್ಶನದ ಸಮಯವನ್ನು ಬೆಳಗ್ಗೆ 5 ರಿಂದ ರಾತ್ರಿ 9ರ ವರೆಗೆ ವಿಸ್ತರಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತಾಧಿಗಳಿಗಾಗಿ ವಾಸ್ತವ್ಯಕ್ಕಿದ್ದ ನಿರ್ಬಂಧವನ್ನು ಇಂದಿನಿಂದ ತೆರವುಗೊಳಿಸಲಾಗಿದೆ. ಇನ್ನು ಮುಂದೆ ಬೆಟ್ಟದಲ್ಲಿನ ವಸತಿಗೃಹ, ಲಾಡ್ಜ್​​ಗಳಲ್ಲಿ ತಂಗಬಹುದಾಗಿದೆ ಎಂದು ತಿಳಿಸಿದ್ದಾರೆ.

ಇನ್ನು, ದಾಸೋಹ ಸೌಲಭ್ಯ, ಮುಡಿಸೇವೆ, ಲಾಡು ಪ್ರಸಾದ ವಿತರಣೆ ಸೇರಿದಂತೆ ದೇಗುಲದಲ್ಲಿನ ಸೇವಾ ಉತ್ಸವಗಳು, ವಿಶೇಷ ಪೂಜೆಗಳು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪದಡಿ ಪ್ರಕರಣ ದಾಖಲಿಸುವಂತೆ ಕೋರಿದ್ದ ಅರ್ಜಿ ವಜಾ: ಬಿಎಸ್​ವೈಗೆ ಬಿಗ್​ ರಿಲೀಫ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.