ಚಾಮರಾಜನಗರ : ಕಾಡುಹಂದಿಯ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆಯಲ್ಲಿ ನಡೆದಿದೆ.
ಗಿರೀಶ್ ಎಂಬುವರ ಜಮೀನಿನ ಹತ್ತಿರ ಹುಲಿ ದಾಳಿ ಮಾಡಿದ್ದು ರೈತರು ಜಮೀನುಗಳಿಗೆ ತೆರಳಲು ಆತಂಕಗೊಂಡಿದ್ದಾರೆ. ಕೆಬ್ಬೇಪುರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಲಿ ಇದಾಗಿರಬಹುದು ಎಂಬುದು ಸ್ಥಳೀಯರ ಶಂಕೆ. ಜನವಸತಿ ಸಮೀಪ ಈ ಘಟನೆ ನಡೆದಿದ್ದು, ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.