ಚಾಮರಾಜನಗರ: ಮದುವೆಗೆ ಬಂದಿದ್ದ ಸ್ನೇಹಿತರು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದಲ್ಲಿ ನಡೆದಿದೆ.
ಬೆಂಗಳೂರಿನ ಮನೋಜ್ ಕುಮಾರ್(23), ರಾಮನಗರದ ಲೋಕೇಶ್(25) ಚಿಕ್ಕನಾಯಕನಹಳ್ಳಿಯ ವೀಣಾ(23) ಮೃತ ದುರ್ದೈವಿಗಳು. ಮುಡುಕುತೊರೆಯ ಸ್ನೇಹಿತನ ಮದುವೆಗೆ ಬಂದು ಬಳಿಕ ಶಿವನ ಸಮುದ್ರಕ್ಕೆ ಭೇಟಿ ನೀಡಿದ ವೇಳೆ ಘಟನೆ ನಡೆದಿದೆ.
ನೀರಿನ ಸೆಳೆತಕ್ಕೆ ಸಿಕ್ಕ ವೀಣಾ ಎಂಬವರನ್ನು ಕಾಪಾಡಲು ಲೋಕೇಶ್ ತೆರಳಿದ್ದಾರೆ. ಆದ್ರೆ, ಇಬ್ಬರೂ ನೀರಿನ ಸೆಳೆತಕ್ಕೆ ಸಿಕ್ಕಿದ್ದನ್ನು ಕಂಡು ಕಾಪಾಡಲು ತೆರಳಿದ ಮನೋಜ್ ಕುಮಾರ್ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಶವಗಳನ್ನು ಹೊರ ತೆಗೆದಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.