ETV Bharat / state

ಮದುವೆ ಹಿಂದಿನ ದಿನ ಕೈ ಕೊಟ್ಟ ವರ: ಹುಡುಗನ ಮನೆ ಮುಂದೆ ವಧು ಧರಣಿ - ಚಾಮರಾಜನಗರ

ಎರಡು ಕುಟುಂಬಸ್ಥರಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ನಾಳೆ ಬೆಳಗಾದರೆ ನವ ಜೋಡಿ ಗೃಹಾಸ್ತಾಶ್ರಮಕ್ಕೆ ಕಾಲಿಡುತ್ತಿದ್ದರು. ಆದರೆ, ಅದೇನಾಯ್ತೋ ಏನೋ ಗೊತ್ತಿಲ್ಲ. ಸಡನ್​ ಆಗಿ ಯುವಕ ಮದುವೆ ಬೇಡ ಎಂದು ಹಿಂದೆ ಸರಿದಿದ್ದರಿಂದ ಯುವತಿಯ ಬಾಳು ಕತ್ತಲಲ್ಲಿ ಬಿದ್ದಂತಾಗಿದೆ.

the-groom-refused-to-marry
ಮದುವೆ ಹಿಂದಿನ ದಿನ ಕೈ ಕೊಟ್ಟ ವರ
author img

By ETV Bharat Karnataka Team

Published : Dec 11, 2023, 2:36 PM IST

ಚಾಮರಾಜನಗರ: ಮದುವೆ ಹಿಂದಿನ ದಿನ ವರನೊಬ್ಬ ಕೈಕೊಟ್ಟು ಪರಾರಿಯಾದ ಹಿನ್ನೆಲೆ ಮದುವೆಗಾಗಿ ತಿಂಗಳುಗಟ್ಟಲೇ ಕಾದು ಕುಳಿತ್ತಿದ್ದ ಯುವತಿಯ ಬಾಳು ಈಗ ಕತ್ತಲ್ಲಲ್ಲಿ ಮುಳುಗಿದೆ. ಇದರಿಂದಾಗಿ ಹುಡುಗನ ಮನೆ ಮುಂದೆ ವಧುವಿನ ಮನೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದಲ್ಲಿ ನಡೆದಿದೆ.

ಏನಿದು ಪ್ರಕರಣ?: ಕೊಳ್ಳೇಗಾಲದ ಶಂಕನಪುರ ಬಡಾವಣೆಯ ನಿವಾಸಿ ದಿವ್ಯಶ್ರೀ ಪ್ರತಿಭಟನೆ ಮಾಡಿದ ಯುವತಿಯಾಗಿದ್ದು, ಕುಂತೂರು ಗ್ರಾಮದ ಮಹೇಶ್ ಎಂಬಾತ ಮದುವೆ ಹಿಂದಿನ ದಿನ ಪರಾರಿಯಾದ ವರನಾಗಿದ್ದಾನೆ.

ಬೆಂಗಳೂರಲ್ಲಿ ಪ್ರೇಮ್ ಕಹಾನಿ: ಬೆಂಗಳೂರಿನಲ್ಲಿ ದಿವ್ಯಶ್ರೀ ಹಾಗೂ ಮಹೇಶ್ ನಡುವೆ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ನಂತರ ಇವರಿಬ್ಬರು ಕಳೆದ ಐದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ಒಟ್ಟಾಗಿ ಇದ್ದರು.

ಕೆಲ ತಿಂಗಳ ಹಿಂದಷ್ಟೆ ಯುವತಿ ನನ್ನನ್ನು ಮದುವೆ ಆಗು ಎಂದು ಮಹೇಶ್​ ಅವರನ್ನ ಕೇಳಿದ್ದಳು. ಮೂರು ತಿಂಗಳು ಬಳಿಕ ಇಬ್ಬರೂ ಮದುವೆ ಆಗೋಣ ಎಂಬ ಭರವಸೆಯನ್ನು ಮಹೇಶ್ ಕೂಡ ನೀಡಿದ್ದ. ಆದರೆ, ಮಾತಿಗೆ ನಡೆದುಕೊಳ್ಳದ ಕಾರಣ ತನ್ನ ಪಾಲಕರ ಬಳಿ ಯುವತಿ ಅಳಲು ತೋಡಿಕೊಂಡಿದ್ದಳು. ಅದರಂತೆ ಇತ್ತೀಚೆಗಷ್ಟೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ ಮತ್ತು ಯುವತಿಯ ಪಾಲಕರು ಎರಡು ಊರಿನ ಯಜಮಾನರು ಒಂದೆಡೆ ಸೇರಿ ಪಂಚಾಯಿತಿ ಮಾಡುವ ಮೂಲಕ ಇವರಿಬ್ಬರಿಗೂ ಚಿಲಕವಾಡಿ ದೇವಾಲಯದಲ್ಲಿ ಮದುವೆ ನಿಶ್ಚಯ ಮಾಡಿದ್ದರು. ಇಷ್ಟಾದರೂ ಯುವಕ ಪರಾರಿಯಾಗಿದ್ದಾನೆ.

ಮದುವೆ ಹಿಂದಿನ ದಿನ ಯುವಕ ನಾಪತ್ತೆ: ಅದರಂತೆ, ಎರಡು ಮನೆಯವರು ಒಪ್ಪಿ ನವೆಂಬರ್​ 27 ರಂದು ಚಿಲಕವಾಡಿ ಬೆಟ್ಟದಲ್ಲಿ ಮದುವೆ ನಿಶ್ಚಯ ಮಾಡಲಾಗಿತ್ತು. ವಧುವಿಗೆ ತಾಳಿ, ಸೀರೆ, ಕಾಲುಂಗುರ ಖರೀದಿಸಿ ಮದುವೆ ಸಂಭ್ರಮದಲ್ಲಿ ಕುಟುಂಬಸ್ಥರಿದ್ದರು. ಆದರೆ, ನವೆಂಬರ್​ 26 ರಂದು ಮಹೇಶ್ ತನ್ನ ಫೋನ್ ಸ್ವೀಚ್ಡ್​​ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ.

ಈ ಸಂಬಂಧ ಮಾಂಬಳ್ಳಿ ಪೊಲೀಸ್​ ಠಾಣೆಗೆ ದಿವ್ಯಶ್ರೀ ದೂರು ಕೂಡ ಕೊಟ್ಟಿದ್ದಾರೆ. ಆದರೆ, ತಿಂಗಳು ಆದರೂ ವರನ ಸುಳಿವು ಇಲ್ಲದೇ ಇರುವುದರಿಂದ ಬೇಸತ್ತು ಆತನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮಹೇಶ್​ನನ್ನು ಹುಡುಕಿ ಕೊಡಲಾಗುವುದು ಎಂದು ಸಮಾಧಾನ ಪಡಿಸಿ ಆಕೆಯನ್ನು ಶಂಕನಪುರ ಗ್ರಾಮಕ್ಕೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಮಗನ 'ಪ್ರೀತಿ', ತಾಯಿಗೆ ಶಿಕ್ಷೆ; ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.