ಗುಂಡ್ಲುಪೇಟೆ: ಗಜರಾಜನನ್ನ ಬೇಟೆಯಾಡಲು ಸೀಳುನಾಯಿಗಳು ಹೊಂಚು ಹಾಕಿ ಆನೆ ಮೇಲೆ ದಾಳಿ ನಡೆಸಿವೆ. ಇವುಗಳ ಉಪಟಳ ತಾಳಲಾರದೇ ಗಜರಾಜ ಕೋಪಗೊಂಡಿದ್ದಾನೆ. ಬಂದ ಸಿಟ್ಟಿನಿಂದ ಸೀಳು ನಾಯಿಗಳನ್ನು ಅಟ್ಟಾಡಿಸಿ ತನ್ನ ಉಗ್ರಾವತಾರ ತೋರಿಸಿದ್ದಾನೆ.
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ? ಯಾವಾಗ? ನಡೆದಿದೆ ಎಂಬ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ, ಈ ಘಟನೆ ಬಂಡೀಪುರ ಅಥವಾ ಬಿಳಿಗಿರಿರಂಗನ ಬೆಟ್ಟದ ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆನೆಯ ಉಗ್ರರೂಪ ನೋಡಿ ಫುಲ್ ಫಿದಾ ಆಗಿದ್ದಾರೆ.