ಚಾಮರಾಜನಗರ: ಪರಿಸರ ಮಾಲಿನ್ಯ ಕುರಿತು ಪಾಠ ಮಾಡುವ ಶಿಕ್ಷಕರೇ ಪ್ಲಾಸ್ಟಿಕ್ ಮೊರೆ ಹೋದ ಘಟನೆ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕ ದಿನಾಚರಣೆಯಲ್ಲಿ ನಡೆಯಿತು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮತ್ತು ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ನಿಷೇಧಿಸಿದ ಪ್ಲಾಸ್ಟಿಕ್ ಕವರ್ಗಳು ಶಿಕ್ಷಕರ ಕೈಯಲ್ಲಿ ರಾರಾಜಿಸಿದವು. ಸನ್ಮಾನಿತರಿಗೆ ಶಾಲು, ಹಾರ ಹಾಕುವ ಜೊತೆ ಜೊತೆಗೆ ಪ್ಲಾಸ್ಟಿಕ್ ಕವರ್ಗಳನ್ನು ನೀಡಿದ್ದು ಎದ್ದು ಕಂಡಿತು.
ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವ ನಗರಸಭೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಡಿಸಿ, ಸಂಸದರು, ಶಾಸಕರು ಸಮ್ಮುಖದಲ್ಲೇ ಪ್ಲಾಸ್ಟಿಕ್ ಕವರ್ಗಳು ರವಾನೆಯಾಗಿದ್ದಕ್ಕೆ ಸಾರ್ವಜನಿಕರು ಕಿಡಿಕಾರಿದ್ದಾರೆ.
ಇನ್ನಾದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿ ಜಿಲ್ಲಾಡಳಿತ ಪರಿಸರಸ್ನೇಹಿ ಕಾರ್ಯಕ್ರಮಗಳಿಗೆ ನಾಂದಿ ಹಾಡಬೇಕಿದೆ.