ETV Bharat / state

ಕೊರೊನಾ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಶಾಸಕ ಮಹೇಶ್

ಕೊರೊನಾ ಹರಡದಂತೆ ತಡೆಯಲು ಸರ್ಕಾರ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದ್ದು, ಸಾರ್ವಜನಿಕರು ಚಾಚು ತಪ್ಪದೇ ಪಾಲಿಸಿ ಎಂದು ಶಾಸಕ ಎನ್.ಮಹೇಶ್ ಸಲಹೆ ನೀಡಿದ್ದಾರೆ.

author img

By

Published : Mar 25, 2020, 5:31 PM IST

Take precautionary measure to control Corona
ಕೊರೊನಾ ನಿಯಂತ್ರಿಸಲು ಮುಂಜಾಗೃತ ಕ್ರಮ ಕೈಗೊಳ್ಳಿ: ಶಾಸಕ ಎನ್. ಮಹೇಶ್

ಕೊಳ್ಳೇಗಾಲ/ಚಾಮರಾಜನಗರ: ಕೊರೊನಾ ಹರಡದಂತೆ ತಡೆಯಲು ಸರ್ಕಾರ ವಿವಿಧ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದೆ. ಅದರಂತೆ ಕೊಳ್ಳೇಗಾಲ ಜನತೆ ಚಾಚು ತಪ್ಪದೇ ಪಾಲಿಸಬೇಕು. ಇಲ್ಲವಾದಲ್ಲಿ ಮಾರಕ ಕೊರೊನಾ ವೈರಸ್​ಗೆ ತುತ್ತಾಗಬೇಕಾಗುತ್ತದೆ ಎಂದು ಶಾಸಕ ಎನ್.ಮಹೇಶ್ ಎಚ್ಚರಿಸಿದ್ದಾರೆ.

ಕೊರೊನಾ ನಿಯಂತ್ರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಶಾಸಕ ಎನ್.ಮಹೇಶ್
ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎನ್.ಮಹೇಶ್, ಅಲ್ಲಿನ ಅಧಿಕಾರಿಗಳ ಜೊತೆ ವಿಶೇಷ ಕೊರೊನಾ ಘಟಕವನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಯಾರೇ ಆಗಲಿ ಕೊರೊನಾ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಜನಸಾಮಾನ್ಯರು ಅಂತರ ಕಾಯ್ದುಕೊಂಡು ಶುಚಿತ್ವದಿಂದ ಇರಬೇಕು. ಅಲ್ಲದೇ ವಿನಾ ಕಾರಣ ಮನೆ ಬಿಟ್ಟು ಹೊರಗೆ ಬರಬಾರದು ಎಂದು ಸೂಚನೆ ನಿಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿ ನಂಬಬೇಡಿ. ನಿಮ್ಮ ರಕ್ಷಣೆ ನೀವೇ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.