ಚಾಮರಾಜನಗರ: ರಥಸಪ್ತಮಿ ಪ್ರಯುಕ್ತ ನಗರದ ಸೇವಾಭಾರತಿ ಶಾಲೆಯಲ್ಲಿ ಪತಂಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 500 ಮಂದಿ 108 ಬಾರಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
ಯೋಗಗುರು ಪ್ರಕಾಶ್ ಮಾರ್ಗದರ್ಶನದಲ್ಲಿ ಬೆಳಗ್ಗೆ 5.30ರಿಂದ 7.30ರವರೆಗೆ 108 ಸೂರ್ಯ ನಮಸ್ಕಾರಗಳನ್ನು ಮಾಡಿ ನೇಸರನಿಗೆ ನಮನ ಸಲ್ಲಿಸಿದರು. ಇದರೊಟ್ಟಿಗೆ, ವಿವಿಧ ದೇಗುಲಗಳಿಗೆ ಬೆಳಗ್ಗೆಯಿಂದಲೇ ಭಕ್ತಾದಿಗಳು ಹರಿದುಬಂದು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಹಿಂದೂ ಧರ್ಮದಲ್ಲಿ ಸೂರ್ಯನನ್ನು ಗ್ರಹಗಳ ರಾಜ, ಕಣ್ಣಿಗೆ ಕಾಣುವ ದೇವರು ಎಂಬ ನಂಬಿಕೆಯಿದ್ದು, ರಥಸಪ್ತಮಿ ಎಂಬುದು ಸೂರ್ಯ ಹುಟ್ಟಿದ ಬಳಿಕ ರಥ ಏರಿ ಬರುವ ದಿನ ಎಂದು ಜನರ ನಂಬಿಕೆಯಾಗಿದೆ.
ಇದನ್ನೂ ಓದಿ: ಪೊಲೀಸರಿಗೆ ಬಾಡಿ ಕ್ಯಾಮೆರಾ ಅವಳಡಿಸಲು ಹೈಕೋರ್ಟ್ ಆದೇಶ