ಚಾಮರಾಜನಗರ: ಕೊರೊನಾ ಬೆಳವಣಿಗೆಯ ಅಂಕಿಅಂಶಗಳ ಪ್ರಕಾರ, ರಾಜ್ಯ 19 ನೇ ಸ್ಥಾನದಲ್ಲಿದ್ದು ಶೇ.6 ಕೊರೊನಾ ಸೋಂಕಿತರು ಕರ್ನಾಟಕದಲ್ಲಿದ್ದಾರೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಜೀವ ಮತ್ತು ಜೀವನ ಪ್ರಶ್ನೆಯಾಗಿರುವುದರಿಂದ ರಾಜ್ಯದ 9 ಕೊರೊನಾ ಮುಕ್ತ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಂಡರೂ ಅಂತರ್ ಜಿಲ್ಲೆ, ಅಂತರರಾಜ್ಯ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಧಾನಿ ಮೋದಿ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಅನ್ನು ಮುಂದುವರೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏ.30 ರ ವರೆಗೆ ಲಾಕ್ ಡೌನ್ ಮುಂದುವರೆಯಲಿದ್ದು, ಕೊರೊನಾ ಮುಕ್ತ ಜಿಲ್ಲೆಗಳಿಗೆ ಮಾರ್ಗಸೂಚಿ ಪ್ರಕಟಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.
ಸೂಕ್ತ ಸಮಯದಲ್ಲಿ ಪ್ರಧಾನಿ ಲಾಕ್ ಡೌನ್ ಮಾಡಿದ್ದಾರೆ. ಇಲ್ಲದಿದ್ರೆ, 8 ಲಕ್ಷ ಮಂದಿಗೆ ಸೋಂಕು ತಗುಲುತ್ತಿತ್ತು ಎಂದು ವರದಿ ಹೇಳಿದೆ. ಜಾಗತೀಕರಣಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕೊರೊನಾ ಎಂಬ ಮಾತಿದೆ. ಆದರೆ, ಜಾಗತೀಕರಣಕ್ಕೆ ಅತ್ಯುತ್ತಮ ಉದಾಹರಣೆ ಕೊರೊನಾ ವಿರುದ್ಧ ಮಾಡುವ ಸಂಕಲ್ಪ ಎಂದು ವ್ಯಾಖ್ಯಾನಿಸಿದರು.
ಈ ವೇಳೆ ಶಾಸಕರಾದ ನಿರಂಜನ ಕುಮಾರ್ ಹಾಗೂ ಎನ್.ಮಹೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಎಸ್ಪಿ ಎಚ್.ಡಿ.ಆನಂದಕುಮಾರ್, ಸಿಇಒ ಭೋಯರ್ ಇದ್ದರು.