ETV Bharat / state

ಏಕಲವ್ಯನಂತೆ ಗುರುವಿಲ್ಲದೇ ದೊಣ್ಣೆವರಸೆ ಕಲಿತ ಸರ್ಕಾರಿ ಶಾಲೆ ವಿದ್ಯಾರ್ಥಿಗಳು! - ದೊಣ್ಣೆವರಸೆ

ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಗುರುವಿನ ಸಹಾಯವಿಲ್ಲದೇ ಹಿರಿಯರನ್ನು ನೋಡಿ ದೊಣ್ಣೆವರಸೆ ಕಲಿಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ದೊಣ್ಣೆವರಸೆ ಕಲಿತ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

author img

By

Published : Nov 14, 2022, 2:31 PM IST

Updated : Nov 14, 2022, 2:36 PM IST

ಚಾಮರಾಜನಗರ: ಶಾಲಾ‌ ಪಠ್ಯದಲ್ಲಿರುವ ನೋಡಿ ಕಲಿ ಎಂಬ ಮಾತಿನಂತೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಿರಿಯರನ್ನು ನೋಡಿ ದೇಸಿ ಕಲೆಯನ್ನು ರೂಢಿಸಿಕೊಂಡು ಪ್ರಾವೀಣ್ಯತೆ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ‌

ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮದ 6-7 ವಿದ್ಯಾರ್ಥಿಗಳು ತಮ್ಮೂರಿನ ಹಿರಿಯರು ಪ್ರದರ್ಶನ ಮಾಡುತ್ತಿದ್ದ ದೊಣ್ಣೆವರಸೆಯನ್ನು ಕಂಡು ಆಕರ್ಷಿತರಾಗಿ ಏಕಲವ್ಯರಂತೆ ನಿತ್ಯ ಅಭ್ಯಾಸ ಮಾಡಿ ಕಲಿತಿದ್ದು, ಹಿರಿಯರನ್ನು ಮೀರಿಸುವಂತೆ ಕಲೆ ಪ್ರದರ್ಶನ‌ ಮಾಡುತ್ತಿದ್ದಾರೆ.‌ ಎರಡು ಕೈಯಲ್ಲಿ ದೊಣ್ಣೆ ತಿರುಗಿಸುವುದು, ದೊಣ್ಣೆ ಸಹಾಯದಿಂದ ನಡೆಯುವುದು, ಸಮರಾಭ್ಯಾಸದಂತೆ ಪಟ್ಟು ಹಾಕುವುದನ್ನು ಸಿದ್ಧಿಸಿಕೊಂಡಿದ್ದಾರೆ.

ದೊಣ್ಣೆವರಸೆ ಕಲಿತ ಸರ್ಕಾರಿ ಶಾಲೆ ವಿದ್ಯಾರ್ಥಿಗಳು

ಸಿದ್ದಯ್ಯನಪುರ ಗ್ರಾಮದಲ್ಲಿ 7-8 ಮಂದಿ ಹಿರಿಯರು ಈಗಲೂ ಹಬ್ಬ ಹರಿದಿನಗಳಲ್ಲಿ ಪಾರಂಪರಿಕ ಕಲೆಯಾದ ದೊಣ್ಣೆ ವರಸೆಯನ್ನು ಪ್ರದರ್ಶನ ಮಾಡುತ್ತಾರೆ. ಅದರಂತೆ, ಕಳೆದ ದೀಪಾವಳಿ ಹಬ್ಬದಲ್ಲಿ ಹಿರಿಯರು ದೊಣ್ಣೆ ಹಿಡಿದು ಗರಗರನೇ ತಿರುಗಿಸುತ್ತಿದ್ದ ಚಾಕಚಕ್ಯತೆಗೆ ಮನಸೋತ ಚಿರಂತ್, ಜಯಸುಂದರ್, ಪ್ರೀತಂ, ಜೀವನ್, ಅರ್ಜುನ್ ಎಂಬ ಬಾಲಕರು ಈಗ ತಾವು ದೊಣ್ಣೆ ಹಿಡಿದು ವರಸೆ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ದೊಣ್ಣೆ ವರಸೆಯಲ್ಲಿ ಗೋಲ್ಡ್ ಮೆಡಲ್: ವರ್ಲ್ಡ್ ಚಾಂಪಿಯನ್ ಆದ ಗೋಪಿನಾಥಂ ಯುವಕ

ಇನ್ನು ಬಾಲಕರು ಶಾಲೆಯಲ್ಲಿ ಪ್ರದರ್ಶನ ಮಾಡುತ್ತಿದ್ದ ದೊಣ್ಣೆವರಸೆ ಕಂಡು ಉತ್ತೇಜನಗೊಂಡ 8 ನೇ ತರಗತಿ ವಿದ್ಯಾರ್ಥಿನಿಯರಾದ ರೀತುಪ್ರಿಯಾ, ಅಕ್ಷತಾ ಎಂಬುವರು ತಾವೇನೂ ಕಡಿಮೆ ಇಲ್ಲ ಎಂಬಂತೆ ಬಾಲಕರನ್ನು ನೋಡಿ ದೊಣ್ಣೆ ವರಸೆ ಕಲಿತಿದ್ದಾರೆ.

Last Updated : Nov 14, 2022, 2:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.