ETV Bharat / state

ಮನೆಯಲ್ಲಿ ಐಸೋಲೇಟ್​ ಆಗಿದ್ದ ಸೋಂಕಿತನನ್ನೇ ಮಾತ್ರೆಗಾಗಿ ಆಸ್ಪತ್ರೆಗೆ ಕರೆಸಿಕೊಂಡ ಸಿಬ್ಬಂದಿ!

ಜನರು ಹೊರಗಡೆ ಓಡಾಡ್ತಿದ್ದರೆ ಸೋಂಕು ಹರಡುತ್ತದೆ ಎಂದು ಸರ್ಕಾರ ಕರ್ಫ್ಯೂ, ಲಾಕ್​ಡೌನ್​ ಹೀಗೆ ಹಲವು ಸರ್ಕಸ್​ ಮಾಡುತ್ತಿದೆ. ಆದ್ರೆ, ಇಲ್ಲೊಂದು ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಯಿಂದ ಮನೆಯಲ್ಲಿ ಐಸೋಲೇಟ್ ಆಗಿದ್ದ ಕೋವಿಡ್ ಸೋಂಕಿತನನ್ನೇ ಆಸ್ಪತ್ರೆಗೆ ಕರೆಸಿಕೊಂಡಿದ್ದಾರೆ.

Staff  told the infected person to come to the hospital  for tablet
ಚಾಮರಾಜನಗರ ಕೋವಿಡ್ ಸುದ್ದಿ
author img

By

Published : May 1, 2021, 1:43 PM IST

ಚಾಮರಾಜನಗರ: ನಿತ್ಯ ಏರಿಕೆ ಕಾಣುತ್ತಿರುವ ಕೊರೊನಾ ಪ್ರಕರಣಗಳ ನಡುವೆ ಕೆಲ ವೈದ್ಯಕೀಯ ಸಿಬ್ಬಂದಿ ತೋರುತ್ತಿರುವ ಅಚಾತುರ್ಯ ಹಾಗೂ ನಿರ್ಲಕ್ಷ್ಯದಿಂದ ಮಹಾಮಾರಿಗೆ ಕಡಿವಾಣ ಹಾಕದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಿದರ್ಶನವೆಂಬಂತೆ ಸೋಂಕಿತ ವ್ಯಕ್ತಿಯನ್ನೇ ಮಾತ್ರೆಗಾಗಿ ಆಸ್ಪತ್ರೆಗೆ ಕರೆಸಿಕೊಂಡಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ನಗರದ ಬಣಜಿಗರ ಬೀದಿಯಲ್ಲಿ ವಾಸಿಸುವ ಕುಟುಂಬದ ಮೂವರಿಗೆ ಕೊರೊನಾ ಸೋಂಕು ತಗುಲಿದೆ. ಹೋಂ ಐಸೋಲೇಷನ್​ನಲ್ಲಿರುವ ಇವರಿಗೆ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ ಮಾತ್ರೆಗಳನ್ನು ತೆಗೆದುಕೊಂಡು ಹೋಗಿ ಎಂದಿದ್ದಾರೆ. ತಾನು ಹೋಂ ಐಸೋಲೇಷನ್​ನಲ್ಲಿದ್ದೇನೆ ಎಂದರೂ ಮಾತ್ರೆ ಬೇಕೆಂದರೆ ಬನ್ನಿ ಎಂದು ಬೇಜವಾಬ್ದಾರಿ ಮಾತುಗಳನ್ನು ಆಡಿದ್ದಾರೆ. ಕೊನೆಗೆ ಅನಿವಾರ್ಯವಾಗಿ ಸೋಂಕಿತ ವ್ಯಕ್ತಿಯೇ ಆಸ್ಪತ್ರೆಗೆ ತೆರಳಿ ಮಾತ್ರೆ ತೆಗೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ.

ಕೋವಿಡ್ ಸೋಂಕಿತ ವ್ಯಕ್ತಿ

ಓದಿ : ಜಿಮ್ಸ್​ಗೆ ಸಚಿವ ಸುಧಾಕರ್ ಭೇಟಿ: ಅಧಿಕಾರಿಗಳ ವಿರುದ್ಧ ಕಿಡಿಕಾರಿದ ರೋಗಿಗಳ ಸಂಬಂಧಿಕರು

ಹೋಂ ಐಸೋಲೇಷನ್​ನಲ್ಲಿ ಇರುವವರನ್ನು ಆಸ್ಪತ್ರೆಗೆ ಬನ್ನಿ ಎಂದು ವೈದ್ಯರು ಹೇಳುತ್ತಾರೆ. ಅವರ ಮಾತು ಕೇಳಿ ಹೋದರೆ ಪೊಲೀಸರು ಅಡ್ಡ ಹಾಕುತ್ತಾರೆ. ಹೀಗಾದರೆ ಹೋಂ ಐಸೋಲೇಷನ್​ನಲ್ಲಿರಿ ಎಂದು ಯಾಕೆ ಹೇಳಬೇಕು. ದಾರಿಯಲ್ಲಿ ಸಿಕ್ಕವರು ಮಾತನಾಡಿಸಿದಾಗ ಮಾತನಾಡದೇ ತೆರಳಲು ಸಾಧ್ಯವೇ? ಇಡೀ ಕುಟುಂಬವೇ ಹೋಂ ಐಸೋಲೇಷನ್ ಆಗಿರುವಾಗ ನಮ್ಮ ಬೇಕು-ಬೇಡಗಳನ್ನು ಯಾರು ಕೇಳಿಲ್ಲ ಎಂದು ಜಿಲ್ಲಾಡಳಿತದ ಕಾರ್ಯ ವೈಖರಿಯ ವಿರುದ್ಧ ಸೋಂಕಿತ ವ್ಯಕ್ತಿ ಬೇಸರ ಹೊರಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.