ETV Bharat / state

ಗುಂಡ್ಲುಪೇಟೆಯ ಶಾಲೆಯಲ್ಲಿದೆ 'ಅಕ್ಷರ ದಾಸೋಹ ಜೋಳಿಗೆ'.. ನಿತ್ಯವೂ ವಿದ್ಯಾರ್ಥಿಗಳಿಗೆ ಬಗೆ ಬಗೆ ಭೋಜನ

ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ " ಅಕ್ಷರ ದಾಸೋಹ ಜೋಳಿಗೆ " ಎಂಬ ವಿಭಿನ್ನ ಪರಿಕಲ್ಪನೆ ಜಾರಿಯಲ್ಲಿದೆ. ಗ್ರಾಮಸ್ಥರು ತಾವು ಬೆಳೆದ ತರಕಾರಿಗಳು, ಹಣ್ಣುಗಳನ್ನು ಶಾಲೆಗೆ ತಂದು ಕೊಡುತ್ತಾರೆ. ಹಾಗಾಗಿ ಮಕ್ಕಳಿಗೆ ನಿತ್ಯವೂ ವಿಶೇಷ ಆಹಾರ ಲಭ್ಯವಾಗುತ್ತಿದೆ.

special mid day meal for gundlupete govt school children
ಗುಂಡ್ಲುಪೇಟೆಯ ಶಾಲೆಯಲ್ಲಿದೆ 'ಅಕ್ಷರ ದಾಸೋಹ ಜೋಳಿಗೆ'
author img

By

Published : Mar 25, 2022, 10:42 AM IST

ಚಾಮರಾಜನಗರ: ವಿದ್ಯಾರ್ಥಿಗಳಿಗೆ ಕೊಡುವ ಸರ್ಕಾರದ ಮಹತ್ವಾಕಾಂಕ್ಷೆಯ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಗ್ಗೆ ಟೀಕಿಸುವವರೇ ಹೆಚ್ಚು. ‌ಆದರೆ, ಈ ಶಾಲೆ ಹಾಗಲ್ಲ. ಇಲ್ಲಿ ವಿದ್ಯಾರ್ಥಿಗಳು ನಿತ್ಯವೂ ಬಗೆ ಬಗೆಯ ಆಹಾರ ಸೇವಿಸುತ್ತಾರೆ. ಹೌದು, ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ " ಅಕ್ಷರ ದಾಸೋಹ ಜೋಳಿಗೆ " ಎಂಬ ವಿಭಿನ್ನ ಪರಿಕಲ್ಪನೆ ಜಾರಿಯಲ್ಲಿದೆ. ಗ್ರಾಮಸ್ಥರು ತಾವು ಬೆಳೆದ ತರಕಾರಿಗಳು, ಹಣ್ಣುಗಳನ್ನು ಶಾಲೆಗೆ ತಂದುಕೊಡುತ್ತಾರೆ. ಹಾಗಾಗಿ ನಿತ್ಯವೂ ವಿಶೇಷ ಆಹಾರ ಈ ಮಕ್ಕಳಿಗೆ ಲಭ್ಯವಾಗುತ್ತಿದೆ.

ಗುಂಡ್ಲುಪೇಟೆಯ ಶಾಲೆಯಲ್ಲಿದೆ 'ಅಕ್ಷರ ದಾಸೋಹ ಜೋಳಿಗೆ'

ಅಲ್ಲದೇ ಶಾಲೆಯಲ್ಲಿ ಕೈತೋಟ ಮಾಡಿಕೊಂಡಿದ್ದು ಸೊಪ್ಪು, ತರಕಾರಿಗಳನ್ನು ಬೆಳೆಯಲಾಗುತ್ತದೆ.‌ ಇದರೊಟ್ಟಿಗೆ ಗ್ರಾಮಸ್ಥರು ತಾವು ಬೆಳೆದ ಹಣ್ಣು - ತರಕಾರಿಗಳನ್ನು ತಂದು ಕೊಡುತ್ತಾರೆ. ಹಲಸು, ಮಾವು, ನೇರಳೆ, ಬಾಳೆ ಸೇರಿದಂತೆ ವಿವಿಧ ಬಗೆಯ ಹಣ್ಣುಗಳನ್ನು ಹಾಗೂ ಹಲಸಂದೆ, ಹೆಸರು, ಅವರೆ ಸೇರಿದಂತೆ ವಿವಿಧ ಕಾಳುಗಳನ್ನು ಮತ್ತು ತರಕಾರಿಗಳನ್ನು ಈ ಅಕ್ಷರ ದಾಸೋಹ ಜೋಳಿಗೆಗೆ ತಂದುಕೊಡಲಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಮುಂಜಾನೆ 3 ಗಂಟೆಗೆ ಪ್ರದರ್ಶನಗೊಂಡ RRR, ಕುಣಿದು ಕುಪ್ಪಳಿಸಿದ ಫ್ಯಾನ್ಸ್​

ತಿಂಗಳಿಗೆ 15 ಸಿಹಿ ತಿಂಡಿ: ಗ್ರಾಮದಲ್ಲಿ ಏನೇ ಸಮಾರಂಭಗಳು ನಡೆದರೂ ಶಾಲಾ ಮಕ್ಕಳು ಮೊದಲ ಪಂಕ್ತಿಯ ಭೋಜನ ಸವಿಯಲಿದ್ದಾರೆ. ಇನ್ನು ಶಾಲೆಯಲ್ಲಿ ತಿಂಗಳಿಗೆ ಕನಿಷ್ಠವೆಂದರೂ ದಿನ ಬಿಟ್ಟು ದಿನ ಎಂಬಂತೆ ಒಂದೊಂದು ಸಿಹಿತಿಂಡಿ ಮಾಡಲಿದ್ದಾರೆ.‌ ಇವರ ಬಿಸಿಯೂಟದ ಮೆನುವಿನಲ್ಲಿ ಪಾಯಸ, ರವೆ ಉಂಡೆ, ಗುಲಾಬ್ ಜಾಮುನ್, ಕೊಬ್ಬರಿ ಮಿಠಾಯಿ, ಹೋಳಿಗೆ ಕೂಡ ಸೇರಿದ್ದು ವಿದ್ಯಾರ್ಥಿಗಳ ಪಾಲಕರಗಳು ಒಂದೊಂದು ದಿನದ ಸಿಹಿ ತಿಂಡಿಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಇಲ್ಲಿನ ಎಲ್ಲ ವಿದ್ಯಾರ್ಥಿಗಳ ಹುಟ್ಟುಹಬ್ಬವೂ ಶಾಲೆಯಲ್ಲೇ ಆಚರಿಸಲಿದ್ದು, ಆ ದಿನವೂ ಮಕ್ಕಳಿಗೆ ಸಿಹಿ ಊಟ ಹಾಕಲಾಗುತ್ತದೆ. ಹೀಗೆ ಶಾಲೆಯ ಊಟ ಬಹು ರುಚಿಕರವಾಗಿದ್ದು, ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.