ಚಾಮರಾಜನಗರ: ವರಮಹಾಲಕ್ಷ್ಮಿ ಹಬ್ಬ ಎಂದರೇ ಸಿರಿವಂತರ ಹಬ್ಬ ಎನ್ನುವುದು ಸಾಮಾನ್ಯ. ಆದರೆ, ನಗರದ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ನಿರ್ಗತಿಕರೊಂದಿಗೆ ಹಬ್ಬ ಆಚರಿಸಿ ವಿಶಿಷ್ಟತೆ ಮೆರೆದಿದೆ.
ಚಾಮರಾಜೇಶ್ವರ ದೇಗುಲ ಆವರಣದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ ನೇತೃತ್ವದಲ್ಲಿ ನಿರ್ಗತಿಕ ಮಹಿಳೆಯರಿಗೆ ಸೀರೆ, ಅರಿಶಿಣ- ಕುಂಕುಮ ಹಾಗೂ ವಿದ್ಯಾರ್ಥಿನಿಯರಿಗೆ ಅರಿಶಿಣ-ಕುಂಕುಮ ನೀಡಿ ನಾಡು ಸುಭೀಕ್ಷವಾಗಿರಲಿ, ಉತ್ತರದಲ್ಲಿನ ವರುಣನ ಅಬ್ಬರ ನಿಲ್ಲಲ್ಲಿ ಎಂದು ಪ್ರಾರ್ಥಿಸಿದರು.
ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆಯು ಕಳೆದ 10 ವರ್ಷದಿಂದ ವರಮಾಹಲಕ್ಷ್ಮಿ ಹಬ್ಬವನ್ನು ನಿರ್ಗತಿಕರೊಂದಿಗೆ ಆಚರಿಸುತ್ತಾ ಬಂದಿದ್ದು, ಹತ್ತಾರು ಮಂದಿಗೆ ಸೀರೆ, ಶಾಲು, ಹಣ್ಣು-ಹಂಪಲು ವಿತರಿಸುತ್ತಾ ಪ್ರತಿವರ್ಷವೂ ವಿನೂತನವಾಗಿ ಆಚರಿಸುತ್ತಾ ಬಂದಿದ್ದಾರೆ. ಈ ವೇಳೆ ಯುವ ವೇದಿಕೆ ಅಧ್ಯಕ್ಷ ಜಿ.ಬಂಗಾರು ಇನ್ನಿತರರು ಇದ್ದರು.