ಚಾಮರಾಜನಗರ: ಸಿಸಿಡಿ ಮಾಲೀಕ ವಿ ಜಿ ಸಿದ್ಧಾರ್ಥ್ ಸಾವಿನ ಬಳಿಕ ಹಿರಿಯ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಕುಟುಂಬ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದಿದೆ.
ಪತ್ನಿ ಪ್ರೇಮಾ ಕೃಷ್ಣ, ಮಗಳು ಶಾಂಭವಿಯೊಂದಿಗೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ದೇಗುಲದ ಆವರಣದಲ್ಲೇ 20 ಕ್ಕೂ ಹೆಚ್ಚು ನಿಮಿಷ ಕಳೆದಿದ್ದಾರೆ.
ಎಸ್ಎಂಕೆ ಕುಟುಂಬಕ್ಕೆ ಮಲೆಮಹದೇಶ್ವರ ಸ್ವಾಮಿ ಮನೆದೇವರಾಗಿದ್ದು, ಅಳಿಯನ ಸಾವು ಉಂಟು ಮಾಡಿರುವ ಆಘಾತದಿಂದ ಹೊರಬರಲು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.