ETV Bharat / state

ಭಕ್ತಿ ಮೆರೆದ ಸ್ಟಾರ್ ಡೈರೆಕ್ಟರ್: ಬಾಯಿಗೆ ಬೀಗ ಹಾಕಿ ಕುಟುಂಬದ ಪರಂಪರೆ ಪಾಲನೆ - undefined

ಕಳೆದ 5 ವರ್ಷಗಳಿಂದ ಗ್ರಾಮ ದೇವತೆ ಹಬ್ಬದಲ್ಲಿ ಪಾಲ್ಗೊಂಡು, ಬಾಯಿ ಬೀಗ ಸೇವೆಯನ್ನು ತೀರಿಸುತ್ತಿದ್ದಾರಂತೆ ನಿರ್ದೇಶಕ ಚೇತನ್ ಕುಮಾರ್​.

ಚೇತನ್​
author img

By

Published : May 15, 2019, 7:21 PM IST

Updated : May 15, 2019, 11:25 PM IST

ಚಾಮರಾಜನಗರ: ಭರ್ಜರಿ ಹಾಗೂ ಬಹದ್ದೂರ್​ ನಂತಹ ಹಿಟ್​ ಚಿತ್ರಗಳ ನಿರ್ದೇಶಕ ಚೇತನ್ ಕುಮಾರ್, ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ.

ಭರ್ಜರಿ, ಬಹದ್ದೂರ್ ಬಳಿಕ ಭರಾಟೆ ಸಿನಿಮಾ ನಿರ್ದೇಶಿಸಿರುವ ಚೇತನ್ ಕುಮಾರ್, ಇಂದು ಹುಟ್ಟೂರಾದ ಹನೂರು ತಾಲೂಕಿನ ಅಜ್ಜೀಪುರದಲ್ಲಿ ನಡೆದ ಕೋಟೆ ಮಾರಮ್ಮದೇವಿ ಹಬ್ಬದಲ್ಲಿ ಬಾಯಿಗೆ ಬೀಗ ಹಾಕಿಕೊಂಡು, ತಲೆತಲಾಂತರಗಳಿಂದ ತಮ್ಮ ಕುಟುಂಬ ನಡೆಸಿಕೊಂಡು ಬರುತ್ತಿರುವ ಪರಂಪರೆಯನ್ನು ಮುಂದುವರೆಸಿದರು. ಇವರು ಕಳೆದ 5 ವರ್ಷಗಳಿಂದ ಗ್ರಾಮದೇವತೆ ಹಬ್ಬದಲ್ಲಿ ಪಾಲ್ಗೊಂಡು ಬಾಯಿ ಬೀಗ ಸೇವೆಯನ್ನು ಸಲ್ಲಿಸುತ್ತ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಮಾರಿ ಹಬ್ಬದಲ್ಲಿ ನಿರ್ದೇಶಕ ಚೇತನ್​ ಕುಮಾರ್​

ಇನ್ನು ಅದ್ದೂರಿಯಲ್ಲಿ ಸಹಾಯಕ ನಿರ್ದೇಶನದ ಬಳಿಕ ಭರ್ಜರಿ, ಬಹದ್ದೂರ್ ಚಿತ್ರಗಳ ಮೂಲಕ ಮಾಸ್ ಪ್ರೇಕ್ಷಕರ ಮನ ಗೆದ್ದಿರುವ ಚೇತನ್, ಗ್ರಾಮದೇವತೆ ಹಬ್ಬದಲ್ಲಿ ಪಾಲ್ಗೊಂಡು ಕುಟುಂಬದ ಪಾರಂಪಾರಿಕ ಸೇವೆ ಸಲ್ಲಿಸುತ್ತಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.

Intro:ಭಕ್ತಿ ಪರಾಕಷ್ಟೆ ಮೆರೆದ ಸ್ಟಾರ್ ಡೈರೆಕ್ಟರ್:
ಚಿತ್ರದ ಯಶಸ್ಸಿಗಾಗಿ ಬಾಯಿಗೆ ಬೀಗ ಹಾಕಿಕೊಂಡ 'ಬಹದ್ದೂರ್'

ಚಾಮರಾಜನಗರ: ಸಕ್ಸಸ್ ಫುಲ್ ಚಿತ್ರಗಳನ್ನು ನೀಡುತ್ತಾ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿರುವ ಚೇತನ್ ಕುಮಾರ್ ಹುಟ್ಟೂರಿನ ಮಾರಿಹಬ್ಬದಲ್ಲಿ ಭಕ್ತ ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ.

Body:ಭರ್ಜರಿ, ಬಹದ್ದೂರ್ ಬಳಿಕ ಭರಾಟೆ ಸಿನಿಮಾ ನಿರ್ದೇಶಿಸಿರುವ ಚೇತನ್ ಕುಮಾರ್ ಹುಟ್ಟೂರಾದ ಹನೂರು ತಾಲೂಕಿನ ಅಜ್ಜೀಪುರದಲ್ಲಿ ನಡೆದ ಕೋಟೆ ಮಾರಮ್ಮ ಹಬ್ಬದಲ್ಲಿ ಬಾಯಿಗೆ ಬೀಗ ಹಾಕಿಕೊಂಡು ಭಕ್ತಿ ಪರಾಕಾಷ್ಟೆ ಮೆರೆದಿದ್ದಾರೆ.

ತಮ್ಮ ಚಲನಚಿತ್ರಗಳು ಯಶಸ್ಸು ಕಾಣಲೆಂದು ಕಳೆದ ೫ ವರ್ಷಗಳಿಂದ ಗ್ರಾಮದೇವತೆ ಹಬ್ಬದಲ್ಲಿ ಪಾಲ್ಗೊಂಡು ಬಾಯಿ ಬೀಗ ಸೇವೆಯನ್ನು ತೀರಿಸುತ್ತಿದ್ದಾರೆ ಎಂದು ಗ್ರಾಮದ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

Conclusion:ಅದ್ದೂರಿಯಲ್ಲಿ ಸಹಾಯಕ ನಿರ್ದೇಶನದ ಬಳಿಕ ಭರ್ಜರಿ, ಬಹದ್ದೂರ್ ಚಿತ್ರಗಳ ಮೂಲಕ ಮಾಸ್ ಪ್ರೇಕ್ಷಕರ ಮನ ಗೆದ್ದಿದ್ದರು. ಈಗ ಭರಾಟೆ ತೆರೆ ಕಾಣಬೇಕಿದ್ದು ಈ ಚಿತ್ರವೂ ಯಶಸ್ಸು ಕಾಣಲಿ ಎಂದು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.
Last Updated : May 15, 2019, 11:25 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.