ಚಾಮರಾಜನಗರ: ವಿಧ್ವಂಸಕ ಕಾರ್ಯ, ಪೈಶಾಚಿಕ ಕೃತ್ಯ, ಅಶಾಂತಿ, ಕೋಮುಗಲಭೆಗಳಿಗೆ ಅವಕಾಶ ನೀಡದಂತೆ ಕಟ್ಟೆಚ್ಚರಿಕೆ ನೀಡಲು ಕರೆಸಿದ ಗೂಂಡಾಗಳಿಗೆ ಜಿಲ್ಲಾ ಎಸ್ಪಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಸಿದ ರೌಡಿಶೀಟರ್ಗಳ ಪರೇಡ್ನಲ್ಲಿ ಎಸ್ಪಿ ಎಚ್.ಡಿ.ಆನಂದಕುಮಾರ್ ಅವರು ಗಂಭೀರವಾಗಿರುವಂತೆ ಗೂಂಢಾಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಅಪರಾಧ ಕೃತ್ಯಗಳನ್ನು ಎಸಗಿದ್ದರಿಗೆ ಲಾಠಿ ರುಚಿ ತೋರಿಸಿದ್ದಾರೆ. ಪ್ರಸ್ತುತ ಮಾಡುತ್ತಿರುವ ಕೆಲಸದ ಬಗ್ಗೆ ಕೇಳಿದಾಗ ನಗುತ್ತಿದ್ದ ಗೂಂಡಾಗೆ ಎಸ್ಪಿ ಕಪಾಳ ಮೋಕ್ಷ ಮಾಡಿ ಈಗ ನಗು ಎಂದು ಗುರಾಯಿಸಿದರು.
ಎಲ್ಲರ ಕೈಯಲ್ಲಿ ಕಡಗ, ಕತ್ತಿಗೆ ಚೈನ್ ಹಾಕಿದ್ದವರಿಗೆ ಮುಂದೆ ಏನನ್ನೂ ಹಾಕಿಕೊಳ್ಳಬಾರದು. ಕೆಲವರು ಕೊಟ್ಟ ಉಡಾಫೆ ಉತ್ತರಕ್ಕೆ ಸುರಿಯುವ ಮಳೆಯಳ್ಳೇ ಚಳಿ ಬಿಡಿಸಿದರು. ಆಕಸ್ಮಿಕ ಘಟನೆಯಲ್ಲಿ ಎರಡೂ ಕಣ್ಣು ಕಳೆದುಕೊಂಡ ಹೊಂಗನೂರಿನ ರೌಡಿಶೀಟರ್ನ ಹೆಸರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆಯುವಂತೆ ಪಿಎಸ್ಐಗೆ ಸೂಚಿಸಿದರು.
ಗಲಾಟೆ, ದೊಂಬಿ ನಡೆಸದೇ ಶಾಂತಿಯಿಂದ ಇರಬೇಕು. ಬಾಲ ಬಿಚ್ಚಿದರೇ ಕಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಚಾಮರಾಜನಗರ ಉಪವಿಭಾಗದಲ್ಲಿ 410 ರೌಡಿಶೀಟರ್ಗಳಲ್ಲಿ 168 ಮಂದಿ ಮಾತ್ರ ಹಾಜರಾಗಿದ್ದರು.