ETV Bharat / state

ಹುಟ್ಟೂರಿನ ಸರ್ಕಾರಿ ಶಾಲೆಯನ್ನು ಹೈಟೆಕ್ ಮಾಡಲು ಮುಂದಾದ ನಿವೃತ್ತ ಪೊಲೀಸ್! - ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮರಿಸ್ವಾಮಿ

ನಗರದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮರಿಸ್ವಾಮಿ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಸರ್ಕಾರಿ ಶಾಲೆಯನ್ನು ಇಂದು ದತ್ತು ತೆಗೆದುಕೊಂಡು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾಡಲು ಮುಂದಾಗಿದ್ದು, ಇಂದು ಅದಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

Retired police officer
author img

By

Published : Nov 2, 2019, 11:00 PM IST

ಚಾಮರಾಜನಗರ : ಶ್ರೀಮಂತರಾದಾಗ, ಉತ್ತಮ ನೌಕರಿ ಸಿಕ್ಕಾಗ ಹುಟ್ಟೂರನ್ನು ಮರೆತು ನಗರದಲ್ಲಿ ವಾಸಿಸುವವರೇ ಹೆಚ್ಚು. ಆದರೆ ಇವರು ಮಾತ್ರ ತನ್ನ ಹುಟ್ಟೂರಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

ಹುಟ್ಟೂರಿನ ಸರ್ಕಾರಿ ಶಾಲೆಯನ್ನು ಹೈಟೆಕ್ ಮಾಡಲು ಮುಂದಾದ ನಿವೃತ್ತ ಪೊಲೀಸ್!

ನಗರದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮರಿಸ್ವಾಮಿ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಸರ್ಕಾರಿ ಶಾಲೆಯನ್ನು ಇಂದು ದತ್ತು ತೆಗೆದುಕೊಂಡು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾಡಲು ಮುಂದಾಗಿದ್ದು, ಇಂದು ಅದಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಹುಟ್ಟಿ ಬೆಳೆದು ಕಲಿತ ಶಾಲೆಯನ್ನು ದತ್ತು ತೆಗೆದುಕೊಂಡಿದ್ದು, ಇಲ್ಲಿನ ಮಕ್ಕಳಿಗೆ ಖಾಸಗಿ ಕಾನ್ವೆಂಟ್​ಗಳಿಗಿಂತ ಕಡಿಮೆ ಇಲ್ಲದಂತೆ ಕೋಟ್ಯಾಂತರ ರೂ‌‌ ವೆಚ್ಚದಲ್ಲಿ ಸೌಲಭ್ಯ ಒದಗಿಸುತ್ತೇನೆ. ವಿದ್ಯಾರ್ಥಿಗಳಿಗೆ ಉತ್ತಮ ಪುಸ್ತಕ, ಕಂಪ್ಯೂಟರ್ ವ್ಯವಸ್ಥೆ, ಸ್ಮಾರ್ಟ್ ಕ್ಲಾಸ್​ಗಳನ್ನು ಒದಗಿಸಲಾಗುವುದು. ಒಂದು ವರ್ಷದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮರಿಸ್ವಾಮಿ ತಿಳಿಸಿದರು.

ಬಳಿಕ ಶಾಸಕ ಆರ್.ನರೇಂದ್ರ ಅವರು ಮಾತನಾಡಿ, ಸರ್ಕಾರದಿಂದ ಅಧಿಕೃತವಾಗಿ ದತ್ತು ಪಡೆದು ಹುಟ್ಟಿದೂರಿನ ಶಾಲೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿರುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮರಿಸ್ವಾಮಿ ಅವರ ಕಾರ್ಯ ಶ್ಲಾಘನೀಯ. ಇದು ಇತರರಿಗೂ ಪ್ರೇರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Intro:ಹುಟ್ಟೂರಿನ ಸರ್ಕಾರಿ ಶಾಲೆಯನ್ನು ಹೈಟೆಕ್ ಮಾಡಲು ಮುಂದಾದ ನಿವೃತ್ತ ಪೊಲೀಸ್!

ಚಾಮರಾಜನಗರ: ಶ್ರೀಮಂತರಾದಾಗ, ಉತ್ತಮ ನೌಕರಿ ಸಿಕ್ಕಾಗ ಹುಟ್ಟೂರನ್ನು ಮರೆತು ನಗರದಲ್ಲಿ ವಾಸಿಸುವವರೇ ಹೆಚ್ಚು. ಆದರೆ, ಇವರು ಮಾತ್ರ ತನ್ನ ಹುಟ್ಟೂರಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

Body:ಹೌದು, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮರಿಸ್ವಾಮಿ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಸರ್ಕಾರಿ ಶಾಲೆಯನ್ನು ಇಂದು ದತ್ತು ತೆಗೆದುಕೊಂಡು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾಡಲು ಮುಂದಾಗಿ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಹುಟ್ಟಿ ಬೆಳೆದು ಕಲಿತ ಶಾಲೆಯಲ್ಲಿ ದತ್ತು ತೆಗೆದುಕೊಂಡಿದ್ದು ಇಲ್ಲಿನ ಮಕ್ಕಳಿಗೆ ಖಾಸಗಿ ಕಾನ್ವೆಂಟ್ ಗಳಿಗಿಂತ ಕಡಿಮೆ ಇರದಂತೆ ಕೋಟ್ಯಾಂತರ ರೂ‌‌ ವೆಚ್ಚದಲ್ಲಿ ಒದಗಿಸುತ್ತೇನೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಪುಸ್ತಕ, ಕಂಪ್ಯೂಟರ್, ಸ್ಮಾರ್ಟ್ ಕ್ಲಾಸ್ ಗಳನ್ನು ಒದಗಿಸಲಾಗುವುದು, ಒಂದು ವರ್ಷದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಬೈಟ್: ಮರಿಸ್ವಾಮಿ, ನಿವೃತ್ತ ಪೊಲೀಸ್ ಮಹಾ ನಿರ್ದೇಶಕ[[[[ ಗಾಗಲ್ ಹಾಕಿರುವ ವ್ಯಕ್ತಿ]]]]]]

Conclusion:ಸರ್ಕಾರದಿಂದ ಅಧಿಕೃತವಾಗಿ ದತ್ತು ಪಡೆದು ಹುಟ್ಟಿದೂರಿನ ಶಾಲೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗದಿರುವುದು ಶ್ಲಾಘನೀಯ. ಇದು ಇತರರಿಗೂ ಪ್ರೇರಣೆ ಎಂದು ಶಾಸಕ ಆರ್.ನರೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.

ಬೈಟ್- ಆರ್.ನರೇಂದ್ರ, ಹನೂರು ಶಾಸಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.