ETV Bharat / state

ಕೊರೊನಾ ಎಫೆಕ್ಟ್: ಭಕ್ತರು ಬಾರದೇ ತುಂಬದ ದೇಗುಲಗಳ ಹುಂಡಿ

ತಾಲೂಕಿನ ಶಿವನಸಮುದ್ರ ಸಮೀಪದ ಮಧ್ಯರಂಗನಾಥ ದೇವಾಲಯದಲ್ಲಿ‌ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದೆ. ಕಳೆದ ಬಾರಿಯ ಸಂಗ್ರಹಕ್ಕೆ ಹೋಲಿಸಿಕೊಂಡರೆ ಶೇ. 40ರಷ್ಟು ಕಡಿಮೆ ಕಾಣಿಕೆ ಸಂಗ್ರಹವಾಗಿದೆ.

counting
counting
author img

By

Published : Jul 30, 2020, 7:34 AM IST

ಚಾಮರಾಜನಗರ (ಕೊಳ್ಳೇಗಾಲ): ಕೊರೊನಾ ಎಫೆಕ್ಟ್​​ನಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರಿಂದ ಶಿವನ ಸಮುದ್ರದ ಸಮೂಹ ದೇವಾಲಯಗಳ ಹುಂಡಿ ಎಣಿಕೆಯಲ್ಲಿ ಭಾರಿ ಇಳಿಕೆ ಕಂಡಿದೆ.

ತಾಲೂಕಿನ ಶಿವನ ಸಮುದ್ರ ಸಮೀಪದ ಮಧ್ಯರಂಗನಾಥ ದೇವಾಲಯದಲ್ಲಿ‌ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು. ಈ ವೇಳೆ 6,67,710 ಲಕ್ಷ ರೂ ಸಂಗ್ರಹವಾಗಿದ್ದು, ಈ ಹಿಂದೆ 2019ರ ಡಿಸೆಂಬರ್​ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದಾಗ ಬರೋಬ್ಬರಿ 10 ಲಕ್ಷ ರೂ. ಸಂಗ್ರಹವಾಗಿತ್ತು.

reduction in money offering in temple
ಹುಂಡಿ ಎಣಿಕೆ ಕಾರ್ಯ

ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ಹುಂಡಿ ಎಣಿಕೆ ಕಾರ್ಯ ಇದೀಗ ಆರು ತಿಂಗಳಿನಲ್ಲಿ ನಡೆದಿದೆ. ಕೊರೊನಾ ಪರಿಸ್ಥಿತಿಯಲ್ಲಿ ದೇಗುಲಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದಾಗಿ ಶ್ರೀ ಮಧ್ಯ ರಂಗನಾಥ ದೇವಾಲಯ, ಸೊಮೇಶ್ವರ ದೇವಾಲಯ, ಆದಿಶಕ್ತಿಮಾರಮ್ಮನ ಸಮೂಹ ದೇವಾಲಯಗಳಲ್ಲಿ ಒಟ್ಟು 6,69, 710 ಲಕ್ಷ ರೂ.ಗಳು ಮಾತ್ರ ಸಂಗ್ರಹವಾಗಿದ್ದು, ಅರ್ಧ ಗ್ರಾಂ ಚಿನ್ನ, 10 ಗ್ರಾಂ ಬೆಳ್ಳಿಯನ್ನು ಭಕ್ತರು ದೇವರಿಗೆ ಅರ್ಪಿಸಿದ್ದಾರೆ.

ಕಳೆದ ಬಾರಿಯ ಸಂಗ್ರಹಕ್ಕೆ ಹೋಲಿಸಿಕೊಂಡರೆ ಶೇ. 40ರಷ್ಟು ಹಣದ ಪ್ರಮಾಣ ಕಡಿಮೆಯಾಗಿದೆ. ಚಿನ್ನ, ಬೆಳ್ಳಿ ಪದಾರ್ಥಗಳ ಸಂಗ್ರಹಣೆಯಲ್ಲೂ ಇಳಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.