ಚಾಮರಾಜನಗರ: ಕೊರೊನಾ ಸಂಕಷ್ಟದ ನಡುವೆ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತವನ್ನು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಲ್ಲಗಳೆದಿದ್ದು ಬಿಎಸ್ವೈ ಸರ್ಕಾರ ಸುಭದ್ರವಾಗಿದೆ ಎಂದಿದ್ದಾರೆ.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ಮನೆಯಲ್ಲಿ ಪೂಜೆಯಿತ್ತು, ಎರಡು ತಿಂಗಳಿನಿಂದ ದೂರವಿದ್ದವರು ಹೋಗಿ ಊಟ ಮಾಡಿದ್ದಾರೆ. ಅವರ ಮನೆಯಲ್ಲಿ ಯಾವುದೇ ಸಭೆ ನಡೆದಿಲ್ಲ. ಇದು ಭಿನ್ನಮತವಲ್ಲ. ಬಿಜೆಪಿ ಸರ್ಕಾರ 100% ಸೇಫ್ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪರೇಷನ್ ಹಸ್ತ ನಡೆಸುತ್ತಿರುವ ಕುರಿತು ಮಾತನಾಡಿ, ಹೈಕಮಾಂಡ್ ಒಪ್ಪಿದರೆ ಕಾಂಗ್ರೆಸ್ನ ಐವರು ಶಾಸಕರಿಂದ ಕೂಡಲೇ ರಾಜೀನಾಮೆ ಕೊಡಿಸುತ್ತೇನೆ. ಇನ್ನೂ ನನ್ನ ಬಳಿ 22 ಅಸಮಾಧಾನ ಹೊಂದಿರುವ ಶಾಸಕರು ಸಂಪರ್ಕ ಹೊಂದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಮತ್ತೆ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಅಲ್ಲಿಗೆ ಹೋಗುತ್ತೇನೆ ಎನ್ನುವವರು ಮೂರ್ಖರು, ನಾನು ಯಡಿಯೂರಪ್ಪನವರ ಪರ. ನನ್ನ ರಾಜಕೀಯ ಅಂತ್ಯ ಬಿಜೆಪಿಯಲ್ಲೇ ಎಂದು ಉತ್ತರಿಸಿದರು.